ಕರ್ನಾಟಕ

karnataka

ETV Bharat / state

ಕಡಬದಲ್ಲಿ ಕಾಡಾನೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ - ಕಡಬದಲ್ಲಿ ಕಾಡಾನೆ ದಾಳಿ

ಕಡಬ ತಾಲೂಕಿನ ಇಚ್ಲಂಪಾಡಿ ಸಮೀಪ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದೆ.

man-seriously-injured-by-elephant-attack-in-mangaluru
ಮಂಗಳೂರು: ಕಾಡಾನೆ ದಾಳಿಯಿಂದ ವ್ಯಕ್ತಿಗೆ ಗಂಭೀರ ಗಾಯ

By

Published : May 28, 2023, 7:06 PM IST

Updated : May 28, 2023, 8:22 PM IST

ಕಡಬ (ದಕ್ಷಿಣ ಕನ್ನಡ):ಕಡಬತಾಲೂಕಿನಲ್ಲಿ ಮತ್ತೆ ಕಾಡಾನೆ ದಾಳಿ ಪ್ರಕರಣ ನಡೆದಿದೆ. ಘಟನೆಯಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಚ್ಲಂಪಾಡಿಯ ನಡುಮನೆ ಕ್ರಾಸ್ ಬಳಿ ಇಂದು ಮಧ್ಯಾಹ್ನ ಘಟನೆ ಸಂಭವಿಸಿದೆ. ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿರುವ ವಿಜುಕುಮಾರ್ ಎಂಬವರು ಗಾಯಗೊಂಡಿದ್ದಾರೆ. ಕೆಲಸಕ್ಕೆಂದು ಹೋಗುತ್ತಿದ್ದಾಗ ಕಾಡಾನೆ ದಾಳಿ ನಡೆಸಿದೆ.

ವಿಜುಕುಮಾರ್ ಅವರನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಕರೆದೊಯ್ಯಲಾಗಿದೆ. ಧರ್ಮಸ್ಥಳ- ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಜನವಸತಿ ಪ್ರದೇಶದಲ್ಲಿ ಎರಡು ಕಾಡಾನೆಗಳು ಇರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಲಭ್ಯವಾಗಿದೆ. ಗ್ರಾಮಸ್ಥರು, ಸುಬ್ರಹ್ಮಣ್ಯ-ಧರ್ಮಸ್ಥಳ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಕೆಲವು ತಿಂಗಳ ಹಿಂದೆ ಕಾಡಾನೆ ದಾಳಿಗೆ ಯುವತಿಸಹಿತ ಇಬ್ಬರು ಬಲಿಯಾಗಿದ್ದರು. ಆ ಬಳಿಕ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಿ ಒಂದು ಆನೆಯನ್ನು ಸೆರೆ ಹಿಡಿದು ಸ್ಥಳಾಂತರಿಸಲಾಗಿತ್ತು.

ಇದನ್ನೂ ಓದಿ:ಕೊಡಗು: ಎರಡು ದಿನಗಳ ಹಿಂದೆ ಕಾಡಾನೆ ದಾಳಿಗೆ ಒಳಗಾಗಿದ್ದ ಕಾರ್ಮಿಕ ಸಾವು..

ಕಾಡಾನೆ ದಾಳಿಯಿಂದ ಮಹಿಳೆ ಬಲಿ: ಇತ್ತೀಚೆಗೆ ಆನೇಕಲ್​ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಅಂಚಿನಲ್ಲಿರುವ ಹಕ್ಕಿ ಪಿಕ್ಕಿ ಕಾಲೋನಿ ಬಳಿ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿತ್ತು. ಉದ್ಯಾನದ ಸಿಬ್ಬಂದಿ ಕುಮಾರ್​ ಎಂಬವರ ತಾಯಿ ನಾಗಮ್ಮ (50) ಮೃತರು ಎಂದು ಗುರುತಿಸಲಾಗಿತ್ತು. ಉದ್ಯಾನದಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಮಗನಿಗೆ ಇಳಿ ಕತ್ತಲಿನಲ್ಲಿ‌ ಊಟ ಕೊಡಲು ಹೋಗುತ್ತಿದ್ದಾಗ ಆನೆ ದಾಳಿಗೆ ಒಳಗಾಗಿದ್ದರು. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಬನ್ನೇರುಘಟ್ಟ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ:ಎಲಿಫೆಂಟ್ ಇನ್ ಚಾರ್ಮಾಡಿ ಘಾಟ್: ಜೀವ ಭಯದಲ್ಲೇ ಬದುಕುತ್ತಿರುವ ಸಾರ್ವಜನಿಕರು

ಕತ್ತಲಾಗುತ್ತಿದ್ದಂತೆ ಜೈವಿಕ ಉದ್ಯಾನದ ಬಳಿ ಕಾಡಾನೆಗಳು ಓಡಾಡುವುದು ಸಹಜವಾಗಿದ್ದು, ಆನೆ-ಮಾನವ ಸಂಘರ್ಷ ಇತ್ತೀಚೆಗೆ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ಶ್ವಾನ ಸೈನಿಕ ತರಬೇತಿಯ ಸೈನಿಕ ಹೆಚ್.ಎನ್.ಸಿಂಗ್ (33) ಒಂಟಿ ಸಲಗನ ದಾಳಿಯಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದರು.

ಕಾಡಾನೆ ದಾಳಿಗೆ ಬಲಿಯಾಗಿದ್ದ ರೈತ: ಕೆಲವು ದಿನಗಳ ಹಿಂದೆ ನಡೆದ ಪ್ರಕರಣವೊಂದರಲ್ಲಿ ದನ ಮೇಯಿಸಲು ಕಾಡಿಗೆ ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೊಳ್ಳೆಪುರ ದೊಡ್ಡಿ ಗ್ರಾಮದ ಬಳಿ ನಡೆದಿತ್ತು. ಸೊಳ್ಳೆಪುರ ದೊಡ್ಡಿ ನಿವಾಸಿ ಅಲಗಪ್ಪ ಮೃತಪಟ್ಟಿದ್ದರು. ದನಗಳನ್ನು ಮೇಯಿಸಲೆಂದು ಹಲಗಪ್ಪ ನಿತ್ಯ ಕಾಡಿಗೆ ಹೋಗುತ್ತಿದ್ದರು. ಎಂದಿನಂತೆ ಹೋಗಿದ್ದಾಗ ಆನೆ ದಾಳಿ ನಡೆಸಿದೆ ಕೊಂದು ಹಾಕಿತ್ತು.

ಇದನ್ನೂ ಓದಿ:ನಾಗರಹೊಳೆಯಲ್ಲಿ ಆನೆ ಗಣತಿ ಮುಕ್ತಾಯ, ಗಣತಿಯಲ್ಲಿ ಕಾಣಿಸಿಕೊಂಡ 400ಕ್ಕೂ ಹೆಚ್ಚು ಆನೆಗಳು..!

Last Updated : May 28, 2023, 8:22 PM IST

ABOUT THE AUTHOR

...view details