ಕರ್ನಾಟಕ

karnataka

ETV Bharat / state

ದುರಹಂಕಾರ ತೋರಿಸಲು ಹೋಗಿ ₹100 ಬದಲು 2500 ರೂ.ದಂಡ ಕಟ್ಟಿದ ಯುವಕ

ಕಳೆದ ಮೂರು ದಿನಗಳ ಹಿಂದೆ ಇಲ್ಲಿನ ಮರ್ಧಾಳ ಎಂಬಲ್ಲಿ ನಾಲ್ವರು ಯುವಕರು ಕೋವಿಡ್ ಕಾರ್ಯಪಡೆಯೊಂದಿಗೆ ವಾಗ್ವಾದಕ್ಕೆ ಇಳಿದು ಕಾನೂನು ಉಲ್ಲಂಘಸಿ ಪೊಲೀಸರಿಂದ ಲಾಠಿ ಏಟು ತಿಂದು ಜೊತೆಗೆ ದಂಡ ಕಟ್ಟಿದ್ದರು..

traffic rules violation
ಕಡಬ

By

Published : Apr 30, 2021, 4:30 PM IST

Updated : May 1, 2021, 7:27 AM IST

ಕಡಬ : ಮಾಸ್ಕ್ ಧರಿಸದಿದ್ದಕ್ಕೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಯುವಕನೋರ್ವ 100 ರೂ.ದಂಡ ವಿಧಿಸಿದ್ದಕ್ಕೆ ಕೋವಿಡ್ ಕಾರ್ಯಪಡೆಯ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಕೊನೆಗೂ ದುಬಾರಿ ದಂಡ ನೀಡಿ ತೆರಳಿದ ಘಟನೆ ಕಡಬದಲ್ಲಿ ನಡೆದಿದೆ.

ಬೈಕ್​ನಲ್ಲಿ ಹೆಲ್ಮೆಟ್ ಧರಿಸದೆ ಕಡಬಕ್ಕೆ ಆಗಮಿಸಿದ ಉಪ್ಪಿನಂಗಡಿಯ ಇರ್ಷಾದ್ ಎಂಬಾತ ಮಾಸ್ಕ್ ಧರಿಸದೆ ಕಡಬದ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದ.

ಈ ಸಮಯದಲ್ಲಿ ಕೋವಿಡ್ ಕಾರ್ಯಪಡೆಯ ಅಧಿಕಾರಿ ಹರೀಶ್ ಬೆದ್ರಾಜೆ ಅವರು ಆತನನ್ನು ತಡೆದು ನಿಲ್ಲಿಸಿ 100 ರೂ. ದಂಡ ವಿಧಿಸಿದ್ದಾರೆ.

ಈ ವೇಳೆ ಯುವಕ ಅಧಿಕಾರಿಗಳೊಂದಿಗೆ ಗಲಾಟೆ ಮಾಡಿ ದುರ್ವರ್ತನೆ ತೋರಿ ಬಳಿಕ ತನ್ನ ವಾಹನದೊಂದಿಗೆ ಹೊರಡಲು ತಯಾರಾಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮನಾಯ್ಕ್ ಬೈಕ್​ ವಶಪಡಿಸಿಕೊಂಡು ಠಾಣೆಗೆ ತಂದಿದ್ದಾರೆ. ಠಾಣೆಗೆ ಬಂದು ಪರಿಶೀಲನೆ ಮಾಡಿದಾಗ ಈತನಿಗೆ ಡ್ರೈವಿಂಗ್ ಲೈಸೆನ್ಸ್, ಹೆಲ್ಮೆಟ್ ಯಾವುದೂ ಇಲ್ಲದಿರುವುದು ತಿಳಿದು ಬಂದಿದೆ.

ಇದರಿಂದಾಗಿ ಈತನಿಗೆ ಪರವಾನಗಿ ಇಲ್ಲದೇ ವಾಹನ ಚಾಲನೆ, ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಸೇರಿದಂತೆ, 2500 ರೂ. ದಂಡ ವಿಧಿಸಿದ್ದಾರೆ. ಕೇವಲ 100 ರೂ. ಕೊಟ್ಟು ತೆರಳುವುದನ್ನು ಬಿಟ್ಟು ತನ್ನ ದುರಹಂಕಾರದಿಂದಾಗಿ 2500 ರೂ. ದಂಡ ಪಾವತಿಸಿ ಮನೆಗೆ ತೆರಳುವಂತಾಗಿದೆ.

ಇದೇ ರೀತಿ ಕಳೆದ ಮೂರು ದಿನಗಳ ಹಿಂದೆ ಇಲ್ಲಿನ ಮರ್ಧಾಳ ಎಂಬಲ್ಲಿ ನಾಲ್ವರು ಯುವಕರು ಕೋವಿಡ್ ಕಾರ್ಯಪಡೆಯೊಂದಿಗೆ ವಾಗ್ವಾದಕ್ಕೆ ಇಳಿದು ಕಾನೂನು ಉಲ್ಲಂಘಸಿ ಪೊಲೀಸರಿಂದ ಲಾಠಿ ಏಟು ತಿಂದು ಜೊತೆಗೆ ದಂಡ ಕಟ್ಟಿದ್ದರು.

ಇದೀಗ ಹಲವು ಕಡೆಗಳಲ್ಲಿ ಕೆಲವು ಯುವಕರು ಕಾನೂನು ಉಲ್ಲಂಘನೆ ಮಾಡುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

Last Updated : May 1, 2021, 7:27 AM IST

ABOUT THE AUTHOR

...view details