ಬಂಟ್ವಾಳ:ಬೈಕ್, ಚಪ್ಪಲಿ, ಮೊಬೈಲ್ ಅನ್ನು ನೇತ್ರಾವತಿ ಸೇತುವೆ ಮೇಲೆ ಇಟ್ಟು ವ್ಯಕ್ತಿಯೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ನಗರದಲ್ಲಿ ನಡೆದಿದೆ.
ಸ್ಥಳೀಯ ಕಾರಾಜೆ ನಿವಾಸಿ ಜಲೀಲ್ ( 55) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾತ್ರಿ ಸುಮಾರು 11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಲ್ಲಿ ಬೈಕ್, ಚಪ್ಪಲಿ ಹಾಗೂ ಮೊಬೈಲ್ ಕಂಡಿದೆ. ಆದರೆ ಈ ವಸ್ತುಗಳ ಬಳಿ ಯಾರು ಇಲ್ಲವೆಂದು ತಿಳಿದ ಸ್ಥಳೀಯ ಈಜುಗಾರರು ನದಿಯಲ್ಲಿ ಹುಡುಕಲು ಆರಂಭಿಸಿದರು.