ಕರ್ನಾಟಕ

karnataka

ETV Bharat / state

ಮೋದಿ ಭಾವಚಿತ್ರವಿರುವ ಬ್ಯಾನರ್​ಗೆ ಸಗಣಿ, ಕೆಸರು ಎರಚಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥ - ಮಾನಸಿಕ ಅಸ್ವಸ್ಥ

ಪ್ರಧಾನಮಂತ್ರಿಗಳ ಭಾವಚಿತ್ರವಿರುವ ಬ್ಯಾನರ್​ಗೆ ಸಗಣಿ, ಕೆಸರು ಬಳಿದಿದ್ದ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಮಾಡಲಾಗಿದ್ದು, ಆತ ಮಾನಸಿಕ ಅಸ್ವಸ್ಥ ಎಂಬುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಲಾಗಿದೆ.

man-who-insults-modi-photo-in-banner-found-mentally-unstable
ಮೋದಿ ಭಾವಚಿತ್ರವಿರುವ ಬ್ಯಾನರ್​ಗೆ ಸಗಣಿ, ಕೆಸರು ಎರಚ್ಚಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥ

By

Published : Oct 5, 2021, 10:25 AM IST

ಮಂಗಳೂರು:ಇಲ್ಲಿನ ಸುರತ್ಕಲ್ ಬಳಿ ಹಾಕಲಾಗಿದ್ದ ಪ್ರಧಾನಮಂತ್ರಿಗಳ ಭಾವಚಿತ್ರವಿರುವ ಬ್ಯಾನರ್​ಗೆ ಸಗಣಿ, ಕೆಸರು ಬಳಿದಿದ್ದವನನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸುರತ್ಕಲ್ ಗೋವಿಂದ ದಾಸ ಕಾಲೇಜ್ ಬಳಿ ಹಾಕಲಾಗಿದ್ದ ಮೋದಿ ಭಾವಚಿತ್ರದ ಬ್ಯಾನರ್​​ಗೆ ಅ.2ರಂದು ಕೆಸರು, ಸಗಣಿ ಬಳಿಯಲಾಗಿತ್ತು.

ಈ ಘಟನೆ ಸಂಬಂಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಸಿಟಿವಿ ಪರಿಶೀಲಿಸಿದ ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದರು. ಇದೀಗ ಕೃತ್ಯ ನಡೆಸಿದವನನ್ನು ಪತ್ತೆ ಮಾಡಲಾಗಿದ್ದು, ಆತ ಮಾನಸಿಕ ಅಸ್ವಸ್ಥ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ:ಸಿಸಿಟಿವಿ ಹಾಕಿಸದಿದ್ದರೆ ಬೀಳುತ್ತೆ ದುಬಾರಿ ದಂಡ: ಹಾಸನ ವ್ಯಾಪಾರಿಗಳೇ ಎಚ್ಚರ

ABOUT THE AUTHOR

...view details