ಮಂಗಳೂರು(ದಕ್ಷಿಣ ಕನ್ನಡ):ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಶನಿವಾರಸಂತೆಯ ರೋಗಿಯೊಬ್ಬರು ಚಿಕಿತ್ಸೆಯ ಬಳಿಕ ಆಂಬುಲೆನ್ಸ್ ಮೂಲಕ ಮನೆಗೆ ತೆರಳುತ್ತಿರುವಾಗ ಸುಳ್ಯದಲ್ಲಿ ಆಂಬುಲೆನ್ಸ್ ಪಲ್ಟಿಯಾಗಿ ಮತ್ತೆ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಚಿಕಿತ್ಸೆ ಪಡೆದು ಆಂಬುಲೆನ್ಸ್ನಲ್ಲಿ ತೆರಳುತ್ತಿದ್ದಾಗ ಅಪಘಾತ: ಮತ್ತೆ ಆಸ್ಪತ್ರೆಗೆ ದಾಖಲು! - Private Hospital in Mangalore
ಶನಿವಾರಸಂತೆಯ ಸುರೇಶ್ ಎಂಬುವರು 4 ದಿನದ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಗುಣಮುಖರಾದ ಸುರೇಶ್ ಆಂಬುಲೆನ್ಸ್ ಮೂಲಕ ತಮ್ಮ ಊರಿಗೆ ಪ್ರಯಾಣ ಬೆಳೆಸಿದ್ದರು. ಆದರೆ ವಿಧಿ ಮತ್ತೆ ಇವರನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದೆ.
ಚಿಕಿತ್ಸೆ ಪಡೆದು ಆ್ಯಂಬುಲೆನ್ಸ್ನಲ್ಲಿ ತೆರಳುತ್ತಿದ್ದಾಗ ಅಪಘಾತ: ಮತ್ತೆ ಆಸ್ಪತ್ರಗೆ ದಾಖಲು
ಶನಿವಾರಸಂತೆಯ ಸುರೇಶ್ ಎಂಬುವರು 4 ದಿನದ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಗುಣಮುಖರಾದ ಸುರೇಶ್ ಆಂಬುಲೆನ್ಸ್ ಮೂಲಕ ತಮ್ಮ ಊರಿಗೆ ಪ್ರಯಾಣ ಬೆಳೆಸಿದ್ದರು. ಆದರೆ ವಿಧಿ ಮತ್ತೆ ಇವರನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದೆ.
ಶನಿವಾರಸಂತೆಗೆ ತೆರಳುವ ವೇಳೆ ಸುಳ್ಯದಲ್ಲಿ ಮಳೆಯ ಕಾರಣದಿಂದ ಆಂಬುಲೆನ್ಸ್ ಪಲ್ಟಿಯಾಗಿ ಚಾಲಕ ಕಾರ್ತಿಕ್, ಸುರೇಶ್ ಹಾಗೂ ಅವರ ಪುತ್ರ ಗೌತಮ್ ಗಾಯಗೊಂಡಿದ್ದಾರೆ. ಇವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.