ಸುಳ್ಯ:ಕಳ್ಳನೊಬ್ಬ ಸ್ಕೂಟಿ ಬೈಕ್‌ವೊಂದನ್ನು ಕದ್ದು ತಂದು, ಹೋಟೆಲೊಂದರ ಶೌಚಾಲಯದಲ್ಲಿ ನಿದ್ದೆ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ಸುಳ್ಯದಲ್ಲಿ ಬೆಳಕಿಗೆ ಬಂದಿದೆ. ಮಂಡ್ಯದ ನಿವಾಸಿ ಸುಲ್ತಾನ್ ಎಂಬಾತ ಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಸ್ಕೂಟಿ ಕದ್ದು ಬಂದು ಮಂಡ್ಯದತ್ತ ಹೋಗುತ್ತಿದ್ದ. ಈ ಸಂದರ್ಭದಲ್ಲಿ ಸುಳ್ಯ ಸಮೀಪದ ಗೂನಡ್ಕದ ದೊಡ್ಡಡ್ಕದಲ್ಲಿರುವ ತಾಜುದ್ದೀನ್ ಟರ್ಲಿ ಎಂಬವರ ಇಂಡಿಯನ್ ಗೇಟ್ ಹೋಟೆಲ್‌ನಲ್ಲಿ ಟೀ ಕುಡಿಯಲೆಂದು ವಾಹನ ನಿಲ್ಲಿಸಿದ್ದಾನೆ. ಟೀ ಕುಡಿದ ಬಳಿಕ ಈತ ಶೌಚಾಲಯಕ್ಕೆಂದು ಹೋದವನು ಸುಮಾರು ಅರ್ಧ ಗಂಟೆ ಕಳೆದರೂ ಹೊರಬಾರದಿದ್ದಾಗ ಹೋಟೆಲ್‌ನಲ್ಲಿ ಇದ್ದವರು ಶೌಚಾಲಯದ ಬಾಗಿಲು ಬಡಿದಿದ್ದಾರೆ.
ಇದನ್ನೂ ಓದಿ:ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ!
ಆದರೆ ಒಳಗಿನಿಂದ ಯಾವುದೇ ಶಬ್ದ ಬಾರದಿದ್ದಾಗ ಶೌಚಾಲಯದ ಬಾಗಿಲಿನ ಮೇಲ್ಭಾಗದ ರಂಧ್ರದಿಂದ ಇಣುಕಿ ನೋಡಿದ್ದು ಆತ ಕೆಳಗೆ ಬಿದ್ದ ರೀತಿ ಪತ್ತೆಯಾಗಿದ್ದಾನೆ. ಗಾಬರಿಗೊಂಡ ಹೋಟೆಲ್‌ನವರು ಆತನ ಮೇಲೆ ನೀರು ಹಾಕಿದ್ದಾರೆ. ತಕ್ಷಣ ನಿದ್ದೆಯಿಂದೆದ್ದ ಆತ ಶೌಚಾಲಯದ ಬಾಗಿಲು ತೆಗೆದು ಹೊರಬಂದಿದ್ದಾನೆ.