ಕರ್ನಾಟಕ

karnataka

ETV Bharat / state

ಊಟ ಮಾಡುವಾಗ ಗಂಟಲಲ್ಲೇ ಸಿಲುಕಿದ ಆಹಾರ : ಅಸ್ವಸ್ಥಗೊಂಡು ವ್ಯಕ್ತಿ ಸಾವು - ಉಸಿರುಗಟ್ಟಿ ಸಾವು

ಆಹಾರ ಸಿಲುಕಿದ ಪರಿಣಾಮ ಉಸಿರಾಡಲು ಕಷ್ಟವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಮುಡಿಪಿನಡ್ಕ ಸ್ಥಳೀಯ ಕ್ಲಿನಿಕ್​​ವೊಂದಕ್ಕೆ ಕರೆದುಕೊಂಡು ಹೋಗಲಾಯಿತು..

Man dies when food get stuck in throat at Puttur
ಊಟ ಮಾಡುವಾಗ ಗಂಟಲಲ್ಲೇ ಸಿಲುಕಿದ ಆಹಾರ

By

Published : Jun 15, 2021, 9:47 PM IST

ಪುತ್ತೂರು (ದ.ಕ): ಊಟ ಸೇವಿಸುತ್ತಿದ್ದ ವೇಳೆ ಆಹಾರ ಗಂಟಲಿನಲ್ಲಿ ಸಿಲುಕಿ ವ್ಯಕ್ತಿಯೋರ್ವರು ಅಸ್ವಸ್ಥಗೊಂಡು ಬಳಿಕ ಸಾವನ್ನಪ್ಪಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿಯ ಕೊರಗಪ್ಪ ನಲಿಕೆ (55) ಮೃತಪಟ್ಟವರು. ಮಧ್ಯಾಹ್ನ ಮಾಂಸಾಹಾರ ಊಟ ಮಾಡುತ್ತಿದ್ದ ವೇಳೆ ಆಹಾರ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿತ್ತು.

ಆಹಾರ ಸಿಲುಕಿದ ಪರಿಣಾಮ ಉಸಿರಾಡಲು ಕಷ್ಟವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಮುಡಿಪಿನಡ್ಕ ಸ್ಥಳೀಯ ಕ್ಲಿನಿಕ್​​ವೊಂದಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿನ ವೈದ್ಯರು ಪರೀಕ್ಷಿಸಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲು ಸಲಹೆ ನೀಡಿದ್ದಾರೆ.

ಅದರಂತೆ ವ್ಯಕ್ತಿಯನ್ನ ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮೃತ ಕೊರಗಪ್ಪ ನಲಿಕೆ ಅವರ ಪುತ್ರ ಲಕ್ಷ್ಮಿಶ್ ​​ಕೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಓದಿ:ಮರವೂರು ಸೇತುವೆಯಲ್ಲಿ ಬಿರುಕು; ಏರ್ಪೋರ್ಟ್‌ಗೆ ಸಂಪರ್ಕ ಕಡಿತ- ಹೀಗಿದೆ ಪರ್ಯಾಯ ವ್ಯವಸ್ಥೆ..

ABOUT THE AUTHOR

...view details