ಬಂಟ್ವಾಳ: ರಸ್ತೆ ಮಧ್ಯೆ ಮಲಗಿದ್ದ ಕೆಲ ಹೊತ್ತಿನಲ್ಲಿ ದ್ವಿಚಕ್ರವಾಹನ ಹರಿದು ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದ್ದು, ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಜಿಪಮೂಡ ಗ್ರಾಮದ ಕೋಯಮಜಲು ಎಂಬಲ್ಲಿ ಘಟನೆ ಸೆ.12ರಂದು ರಾತ್ರಿ ಸುಮಾರು 8.15ರ ವೇಳೆ ನಡೆದಿದೆ. ಸಜಿಪಮುನ್ನೂರು ನಿವಾಸಿ ಕೃಷ್ಣಮೂರ್ತಿ (50) ಮೃತಪಟ್ಟವರು.
ರಸ್ತೆಯಲ್ಲಿ ಮಲಗಿದ್ದಾತನ ಮೇಲೆ ಹರಿದ ಸ್ಕೂಟರ್ ಕೃಷ್ಣಮೂರ್ತಿ ಅವರು ನಡೆದುಕೊಂಡು ಹೋಗುತ್ತಿದ್ದು, ಬಳಿಕ ರಸ್ತೆಯಲ್ಲಿ ಮಲಗಿದ್ದಾರೆ. ಈ ಸಂದರ್ಭ ದ್ವಿಚಕ್ರ ವಾಹನವೊಂದು ಅವರ ಮೇಲೆ ಹರಿದು ಸ್ಕೂಟರ್ ಸವಾರನೂ ಬಿದ್ದಿದ್ದಾನೆ.
ಅಪಘಾತ ನಡೆದ ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣಮೂರ್ತಿ ಸಾವನ್ನಪ್ಪಿದ್ದಾರೆ.