ಮಂಗಳೂರು:ಸ್ನೇಹಿತರೊಂದಿಗೆ ಈಜಲು ತೆರಳಿರುವ ವ್ಯಕ್ತಿಯೋರ್ವ ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಗರದ ಮರವೂರು ಡ್ಯಾಂ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.
ಈಜಲು ನದಿಗೆ ತೆರಳಿದ ವ್ಯಕ್ತಿ ನೀರು ಪಾಲು - manglore man died news
ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವ್ಯಕ್ತಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಕಾವೂರು ನಿವಾಸಿ ಪ್ರಶಾಂತ್ ಶೆಟ್ಟಿ (45) ನೀರು ಪಾಲಾಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಮಂಗಳೂರಿನ ಮಂಗಳಾ ಸ್ಟೇಡಿಯಂ ಈಜುಕೊಳದಲ್ಲಿ ಇವರು ಈಜುತ್ತಿದ್ದರು. ಆದರೆ ಕೊರೊನಾ ಸೋಂಕಿನ ಭೀತಿಯಿಂದ ಈಜುಕೊಳ ಮುಚ್ಚಲ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರು ಕೆಲ ದಿನಗಳಿಂದ ಬೆಳಗ್ಗಿನ ಹೊತ್ತು ಮರವೂರು ಡ್ಯಾಂ ಬಳಿ ಈಜಾಡಲು ಬರುತ್ತಿದ್ದರು. ಆದರೆ ಹಗ್ಗದ ರಕ್ಷಣೆಯಲ್ಲಿ ಈಜುತ್ತಿದ್ದ ಇವರು, ಆಕಸ್ಮಿಕವೆಂಬಂತೆ ನದಿಯ ಆಳಕ್ಕೆ ಬಿದ್ದು, ಮೃತಪಟ್ಟಿದ್ದಾರೆ.
ಸುರತ್ಕಲ್‌ನ ಸಂಸ್ಥೆಯೊಂದರಲ್ಲಿ ಪಾಲುದಾರರಾಗಿದ್ದ ಇವರು, ಸಿವಿಲ್ ಇಂಜಿನಿಯರ್ ಆಗಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ಕುರಿತು ಬಚ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.