ಬಂಟ್ವಾಳ/ದಕ್ಷಿಣ ಕನ್ನಡ:ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅನಾರೋಗ್ಯದಿಂದ ಸ್ಥಳೀಯ ನಿವಾಸಿ ಮೋಹನ ಭಂಡಾರಿ (40) ಎಂಬವರು ಗುರುವಾರ ಮೃತಪಟ್ಟಿದ್ದಾರೆ.
ಅನಾರೋಗ್ಯ: ಪುಂಜಾಲಕಟ್ಟೆಯಲ್ಲಿ ವ್ಯಕ್ತಿ ಸಾವು - ಮದ್ಯ ಸಿಗದೇ ವ್ಯಕ್ತಿ ಸಾವು
ಅನಾರೋಗ್ಯದ ಹಿನ್ನೆಲೆ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮದ್ಯವಸನಿಯಾಗಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.
ಅನಾರೋಗ್ಯದಿಂದ ಪುಂಜಾಲಕಟ್ಟೆಯಲ್ಲಿ ವ್ಯಕ್ತಿ ಸಾವು
ಕೂಲಿ ಕಾರ್ಮಿಕರಾಗಿದ್ದ ಅವರು ಅವಿವಾಹಿತರು. ಹಿಂದೆಯೇ ಅನಾರೋಗ್ಯದಿಂದ ಬಳಲುತ್ತಿದ್ದು, ಮದ್ಯ ವ್ಯಸನಿಯಾಗಿದ್ದರು. ಲಾಕ್ಡೌನ್ ಹಿನ್ನೆಲೆ ಮದ್ಯವೂ ದೊರಕದೇ, ಇತ್ತ ಸರಿಯಾಗಿ ಔಷಧವನ್ನೂ ಸೇವಿಸದೇ ನಿತ್ರಾಣಗೊಂಡಿದ್ದ ಎಂದು ಮನೆಮಂದಿ ತಿಳಿಸಿದ್ದಾರೆ. ಗುರುವಾರ ನಿತ್ರಾಣಗೊಂಡಿದ್ದ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.