ಬೆಳ್ತಂಗಡಿ: ವಿದ್ಯುತ್ ಕಂಬ ಸ್ಥಳಾಂತರಿಸುವ ವೇಳೆ ವಿದ್ಯುತ್ ಶಾಕ್ ತಗುಲಿ ಓರ್ವ ಮೃತಪಟ್ಟ ಘಟನೆ ತಾಲೂಕಿನ ಕಳೆಂಜ ಬಳಿಯ ಶಾಲೆತ್ತಡ್ಕ ಜಂಕ್ಷನ್‌ನಲ್ಲಿ ನಡೆದಿದೆ.
ಬೆಳ್ತಂಗಡಿ: ವಿದ್ಯುತ್ ಶಾಕ್ನಿಂದ ಓರ್ವ ಸಾವು, ಇಬ್ಬರಿಗೆ ಗಾಯ - electric disaster in Belthangadi
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕಳೆಂಜ ಬಳಿ ಕಂಬ ಸ್ಥಳಾಂತರಿಸುವ ವೇಳೆ ವಿದ್ಯುತ್ ಅವಘಡ ಸಂಭವಿಸಿದೆ.
![ಬೆಳ್ತಂಗಡಿ: ವಿದ್ಯುತ್ ಶಾಕ್ನಿಂದ ಓರ್ವ ಸಾವು, ಇಬ್ಬರಿಗೆ ಗಾಯ man died due to electric shock in Belthangady](https://etvbharatimages.akamaized.net/etvbharat/prod-images/768-512-9686594-thumbnail-3x2-hrs.jpg)
ಬೆಳ್ತಂಗಡಿಯಲ್ಲಿ ವಿದ್ಯುತ್ ಶಾಕ್ನಿಂದ ಒರ್ವ ಸಾವು
ಮೂಡುಬಿದಿರೆಯ ಖಾಸಗಿ ವಿದ್ಯುತ್ ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿ ಪ್ರತಾಪ್ ಮೃತ ವ್ಯಕ್ತಿ. ಪ್ರತಾಪ್ ವಿದ್ಯುತ್ ಶಾಕ್ನಿಂದ ಕಂಬದಲ್ಲೇ ಮೃತಪಟ್ಟಿದ್ದು, ಜೊತೆಗಿದ್ದ ನಾಗಪ್ಪ ಮೂಡುಬಿದಿರೆ ಹಾಗೂ ಕಿಶೋರ್ ಮೂಡುಬಿದಿರೆ ಗಾಯಗೊಂಡಿದ್ದಾರೆ.
ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಸ್ಥಳಾಂತರಿಸುವ ಕೆಲಸ ನಡೆಯುತ್ತಿತ್ತು. ವಿದ್ಯುತ್ ಕಂಬದಲ್ಲಿ ಪ್ರತಾಪ್ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ತಂತಿಯಲ್ಲಿ ವಿದ್ಯುತ್ ಪ್ರವಹಿಸಿ ಪ್ರತಾಪ್ ಕಂಬದಲ್ಲೇ ಮೃತಪಟ್ಟಿದ್ದಾರೆ.