ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಕೋವಿಡ್​ನಿಂದ ವ್ಯಕ್ತಿ ಸಾವು: ಪುತ್ತೂರಿನಲ್ಲಿ ಅಂತ್ಯ ಸಂಸ್ಕಾರ - ಕೊರೊನಾ ಸೋಂಕಿನಿಂದ ಸಾವು

ಕೊರೊನಾದಿಂದ ಮೃತಪಟ್ಟಿದ್ದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಪುತ್ತೂರಿನ ಮಡಿವಾಳಕಟ್ಟೆಯಲ್ಲಿ ನೆರವೇರಿಸಲಾಗಿದೆ.

Man Death from covid in Bangalore
ಬೆಂಗಳೂರಿನಲ್ಲಿ ಕೋವಿಡ್​ನಿಂದ ವ್ಯಕ್ತಿ ಸಾವು

By

Published : May 1, 2021, 3:07 PM IST

ಪುತ್ತೂರು: ಪೆರ್ಲಂಪಾಡಿ ಮೂಲದ 55 ವರ್ಷದ ವ್ಯಕ್ತಿ ಬೆಂಗಳೂರಿನಲ್ಲಿ ಕೋವಿಡ್​ನಿಂದ ಮೃತಪಟ್ಟಿದ್ದು ಪುತ್ತೂರಿನ ಮಡಿವಾಳಕಟ್ಟೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಮೃತ ವ್ಯಕ್ತಿ ಪೆರ್ಲಂಪಾಡಿವರಾಗಿದ್ದರೂ ಬೆಂಗಳೂರಿನಲ್ಲೇ ನೆಲೆಸಿದ್ದರು. ನಿನ್ನೆ ಕೊರೊನಾದಿಂದ ಮೃತಪಟ್ಟ ಬಳಿಕ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ಮಾಡಲು ತಕ್ಷಣ ವ್ಯವಸ್ಥೆ ಇಲ್ಲದ ಹಿನ್ನೆಲೆ ಪುತ್ತೂರಿಗೆ ತಂದಿದ್ದಾರೆ. ನಂತರ ಶಾಸಕರ ವಾರ್ ರೂಮ್ ಸಹಾಯದೊಂದಿಗೆ ಕೋವಿಡ್ ಮಾರ್ಗಸೂಚಿಯಂತೆ ಅಂತಿಮ ಸಂಸ್ಕಾರ ಮಾಡಲಾಗಿದೆ.

ಈ ಕಾರ್ಯಕ್ಕೆ ಶಾಸಕರ ವಾರ್ ರೂಮ್​ನ ತುರ್ತು ಸೇವಾ ವಿಭಾಗದ ಪಿ.ಜಿ ಜಗನಿವಾಸ ರಾವ್, ನಗರಸಭಾ ಸದಸ್ಯ ನವೀನ್ ಪೆರಿಯತ್ತೋಡಿ ಮತ್ತಿತರರು ಸಹಕರಿಸಿದ್ದಾರೆ.

ABOUT THE AUTHOR

...view details