ಕರ್ನಾಟಕ

karnataka

ETV Bharat / state

ಕೌಟುಂಬಿಕ ಕಲಹ: ಯುವಕ ಆತ್ಮಹತ್ಯೆಗೆ ಶರಣು - Ullala death news

ಪಾನೀರ್ ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಯುವಕ ಕೌಟುಂಬಿಕ ಸಮಸ್ಯೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

Ullala suicide case
Ullala suicide case

By

Published : Jul 18, 2020, 9:00 PM IST

ಉಳ್ಳಾಲ:ಪಾನೀರ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಯುವಕನೊಬ್ಬ ಕೌಟುಂಬಿಕ ಸಮಸ್ಯೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ವಿವರ:

ಬೆಳ್ಮ ಗ್ರಾಮದ ರೆಂಜಾಡಿ ನಿವಾಸಿ ಮಲಿಕ್ (21) ಎಂಬಾತ ಮುಡಿಪು ಮೂಲದ ಯುವತಿಯನ್ನು ಪ್ರೀತಿಸಿ ವಿವಾಹ ಆಗಿದ್ದ. ವಿವಾಹದ ಬಳಿಕ ಮಲಿಕ್ ತನ್ನ ಮನೆಯಿಂದ ಹೊರಬಂದು ಪಾನೀರ್‌ನಲ್ಲಿ ಬಾಡಿಗೆ ಮನೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ವಾಸವಾಗಿದ್ದ. ಮಲಿಕ್‌ಗೆ ದುಡಿಯಲೆಂದು ಯುವತಿಯ ತಂದೆ ರಿಕ್ಷಾ ಖರೀದಿಸಿ ಕೊಟ್ಟಿದ್ದರು. ಆದ್ರೆ ಆತನ ಕುಟುಂಬದಲ್ಲಿ ಹಲವು ಬಾರಿ ಕೌಟುಂಬಿಕ ಕಲಹಗಳು ನಡೆದಿದ್ದು, ಈ ವಿಚಾರವನ್ನು ಪತ್ನಿ ತನ್ನ ತಂದೆಗೆ ತಿಳಿಸಿ ನೋವು ತೋಡಿಕೊಂಡಿದ್ದಳು. ಅವರಿಬ್ಬರ ನಡುವಿನ ಕೌಟುಂಬಿಕ ಸಮಸ್ಯೆಯನ್ನು ಹಿರಿಯರು ಮಾತುಕತೆ ಮೂಲಕ ಇತ್ಯರ್ಥ ಪಡಿಸಿದ್ದರು.

ಕಳೆದ ಎರಡು ದಿನಗಳಿಂದ ಆತ (ಆಟೋ ರಿಕ್ಷಾದಲ್ಲಿ) ದುಡಿದು ಮನೆಗೆ ಬಂದು ಹೆಂಡತಿ ಜೊತೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಶುಕ್ರವಾರ ಕೂಡಾ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಜಗಳ ಮಾಡಿದ್ದಾನೆ ಎನ್ನಲಾಗಿದ್ದು, ಅದೇ ಕಾರಣದಿಂದ ನೊಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details