ಬಂಟ್ವಾಳ:ತಾಲೂಕಿನ ಫರಂಗಿಪೇಟೆಯಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳಿಂದ ತೀವ್ರ ಹಲ್ಲೆಗೊಳಗಾದ ಬಿಜೆಪಿ ಮುಖಂಡ, ಫೋಟೋಗ್ರಾಫರ್ ದಿನೇಶ್ ಶೆಟ್ಟಿಯನ್ನ ಆಸ್ಪತ್ರೆಗೆ ಸಾಗಿಸುವ ಮೂಲಕ ಆಟೋ ಚಾಲಕ ಅಬ್ದುಲ್ ರಶೀದ್ ಪಾವೂರ್ ಮಾನವೀಯತೆ ಮೆರೆದಿದ್ದಾರೆ.
ಬಿಜೆಪಿ ಕಾರ್ಯಕರ್ತನ ಹತ್ಯೆ ಯತ್ನ : ಮಾನವೀಯತೆ ಮೆರೆದ ಆಟೊ ಚಾಲಕ! - ಆಟೋ ಚಾಲಕ ಅಬ್ದುಲ್ ರಶೀದ್ ಪಾವೂರ್
ರಾತ್ರಿ ದುಷ್ಕರ್ಮಿಗಳ ತಂಡ ದಿನೇಶ್ ಶೆಟ್ಟಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಈ ವೇಳೆ ದಿನೇಶ್ ಶೆಟ್ಟಿಯನ್ನ ಅಬ್ದುಲ್ ರಶೀದ್ ಪಾವೂರು ತನ್ನ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ರಾತ್ರಿ ದುಷ್ಕರ್ಮಿಗಳ ತಂಡ ದಿನೇಶ್ ಶೆಟ್ಟಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಈ ವೇಳೆ ದಿನೇಶ್ ಶೆಟ್ಟಿಯನ್ನ ಅಬ್ದುಲ್ ರಶೀದ್ ಪಾವೂರು ತನ್ನ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ದೊರೆಯುವಂತೆ ಮಾಡಿದ ಅಬ್ದುಲ್ ರಶೀದ್ ಪಾವೂರು ಕೆಲಸದಿಂದ ದಿನೇಶ್ ಶೆಟ್ಟಿ ಪ್ರಾಣಕ್ಕೆ ಆಗಬಹುದಾದ ಅಪಾಯ ತಪ್ಪಿದೆ.
ಅಬ್ದುಲ್ ರಶೀದ್ ಪಾವೂರು ಫರಂಗಿಪೇಟೆ ರಿಕ್ಷಾ ಪಾರ್ಕ್ನಲ್ಲಿ ಕೆಲಸ ಮಾಡ್ತಿದ್ದಾರೆ. ಒಂದೇ ವಾರದಲ್ಲಿ ಬಂಟ್ವಾಳದಲ್ಲಿ ನಡೆದ ಎರಡು ಕೊಲೆಯಿಂದ ಆತಂಕಕ್ಕೆ ಒಳಗಾದ ಬಂಟ್ವಾಳ ತಾಲೂಕಿನ ಜನತೆಯನ್ನು ಫರಂಗಿಪೇಟೆಯಲ್ಲಿ ನಡೆದ ಕೊಲೆ ಯತ್ನ ಮತ್ತಷ್ಟು ಆತಂಕಕ್ಕೆ ದೂಡಿತ್ತು. ಇನ್ನು ಘಟನೆಗೆ ಸಂಬಂಧಿಸಿದಂತೆ ಆರೋಪಿ ನವಾದ್ನನ್ನ ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಘಟನೆಗೆ ಸಂಬಂಧಿಸಿ ಎಲ್ಲ ಆರೋಪಿಗಳನ್ನೂ ಬಂಧಿಸಿದಂತಾಗಿದೆ.