ಕರ್ನಾಟಕ

karnataka

ETV Bharat / state

ಗೋಲಿಬಾರ್ ವೇಳೆ ಪೊಲೀಸ್​​​ ಮನೆಯವರ ಅತ್ಯಾಚಾರ ಮಾಡುವಂತೆ ಎಫ್​​​​ಬಿ ಪೋಸ್ಟ್​: ಆರೋಪಿ ಅರೆಸ್ಟ್‌ - ಮಂಗಳೂರಿನಲ್ಲಿ ಪ್ರತಿಭಟನೆ

ಪೊಲೀಸರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಲು ಮತ್ತು ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರ ವಿರುದ್ಧ ಘೋರಾಪರಾಧ ಕೃತ್ಯಕ್ಕೆ  ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡಲಾಗಿದೆ ಎಂದು ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

man-arrested-for-threatening-police-family-members-by-fb-post-during-mangalore-riot
ಮಂಗಳೂರು ಗೋಲಿಬಾರ್ ವೇಳೆ ಪೊಲೀಸ್​​​ ಮನೆಯವರ ಅತ್ಯಾಚಾರ ಮಾಡುವಂತೆ ಎಫ್​​​​ಬಿ ಪೋಸ್ಟ್

By

Published : Jul 7, 2021, 5:08 PM IST

ಮಂಗಳೂರು: ಪೊಲೀಸರ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಎಎ ಮತ್ತು ಎನ್ಆರ್​​ಸಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ನಡೆದ ಗೋಲಿಬಾರ್ ಹಿನ್ನೆಲೆಯಲ್ಲಿ ಪೊಲೀಸರ ಮನೆಯ ಮಹಿಳೆಯರನ್ನು ಅತ್ಯಾಚಾರ ಮಾಡಿ ಸುಡಬೇಕು ಎಂದು ಫೇಸ್​​​​ಬುಕ್​ನಲ್ಲಿ ಪೋಸ್ಟ್ ಹಾಕಿದ್ದಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಾಲವ್ವನ ಹಳ್ಳಿಯ ಯೋಗಿ ಯಾನೆ ಯೋಗೇಶ್.ಎಸ್ (28) ಬಂಧಿತ ಆರೋಪಿ. 2019ರಲ್ಲಿ ಸಿಎಎ ಮತ್ತು ಎನ್​​ಆರ್​​ಸಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್ ನಡೆದು ಇಬ್ಬರು ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಯೋಗೇಶ್ ಎಂಬಾತ ಫೇಸ್‌ಬುಕ್‌ ಖಾತೆಯಲ್ಲಿ ಪೊಲೀಸರ ಮನೆಯ ಮಹಿಳೆಯರನ್ನು ಅವರ ಮನೆಗೆ ನುಗ್ಗಿ ಅತ್ಯಾಚಾರ ಮಾಡಿ ಸುಟ್ಟು ಹಾಕಬೇಕು ಎಂದು ಪೋಸ್ಟ್ ಮಾಡಿದ್ದ.

ಇದನ್ನು ಮನಸುಗಳ ಮಾತು ಮಧುರ ಎಂಬ ಫೇಸ್‌ಬುಕ್‌ ಪೇಜ್​​​ಗೆ ಟ್ಯಾಗ್ ಮಾಡಿ ಅದರ ಸ್ಕ್ರೀನ್ ಶಾಟ್ ತೆಗೆದು ವಾಟ್ಸಾಪ್ ಮೂಲಕ ಪ್ರಸಾರ ಮಾಡಲಾಗಿತ್ತು. ಇದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಲು ಮತ್ತು ಪೊಲೀಸ್ ಕುಟುಂಬಸ್ಥರ ವಿರುದ್ಧ ಘೋರಾಪರಾಧ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ಮಾಡಲಾಗಿದೆ ಎಂದು ಮಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯೋಗೇಶ್​​​​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ನೀರಿನಲ್ಲಿ ಮುಳುಗುತ್ತಿದ್ದವನ ರಕ್ಷಣೆಗೆ ಧಾವಿಸಿದ ವ್ಯಕ್ತಿಗೆ ಹೃದಯಾಘಾತ: ಇಬ್ಬರು ದುರ್ಮರಣ

ABOUT THE AUTHOR

...view details