ಉಳ್ಳಾಲ: ನಿವೇಶನಕ್ಕೆಂದು ಅರ್ಜಿ ನೀಡಲು ಬಂದಿದ್ದ ಮಹಿಳೆಗೆ ಗ್ರಾಮ ಪಂಚಾಯತಿ ಹಿರಿಯ ಸದಸ್ಯನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮುನ್ನೂರಿನಲ್ಲಿ ಬೆಳಕಿಗೆ ಬಂದಿದೆ.
ಉಳ್ಳಾಲ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಗ್ರಾ.ಪಂ ಸದಸ್ಯ ಪೊಲೀಸ್ ವಶ - Man arrested for sexually abusing woman
ಮಹಿಳೆಯೊಬ್ಬರು ನಿವೇಶನದ ಅರ್ಜಿ ನೀಡಲು ಬಂದಿದ್ದ ವೇಳೆ ಗ್ರಾಮ ಪಂಚಾಯತಿ ಸದಸ್ಯನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮುನ್ನೂರಿನಲ್ಲಿ ನಡೆದಿದೆ.
ಪೊಲೀಸ್
ಮಹಿಳೆಯೊಬ್ಬರು ನಿವೇಶನದ ಅರ್ಜಿ ನೀಡಲು ಮುನ್ನೂರು ಪಂಚಾಯತಿಗೆ ಬಂದಿದ್ದರು. ಈ ವೇಳೆ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ಮಹಿಳೆಯನ್ನು ನೇರವಾಗಿ ಅಧ್ಯಕ್ಷರ ಕೊಠಡಿಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಮಹಿಳೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.