ಕರ್ನಾಟಕ

karnataka

ETV Bharat / state

ಅಕ್ರಮ ಮದ್ಯ ಮಾರಾಟ: ಒಬ್ಬನ ಬಂಧನ - ಬಂಟ್ವಾಳ ಅಕ್ರಮವಾಗಿ ಮದ್ಯ ಮಾರಾಟ

ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿ ಬಂಧಿಸಿ, ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Arrest
Arrest

By

Published : Jun 26, 2020, 10:44 AM IST

ಬಂಟ್ವಾಳ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ, ಪೊಲೀಸರು ದಾಳಿ ನಡೆಸಿ ಆರೋಪಿ ಬಂಧಿಸಿ, ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದ ಘಟನೆ ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ನಡೆದಿದೆ.

ಡೆಸ್ಮನ್ ಜಾನ್ಸನ್ ಮಂತೇರೋ ಬಂಧಿತ ಆರೋಪಿ. ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ಡೆಸ್ಮನ್ ಜಾನ್ಸನ್ ಮಂತೇರೋ ಅವರ ಅಂಗಡಿಯ ಎದುರಿನಲ್ಲೇ ಸಾರ್ವಜನಿಕವಾಗಿ ಮದ್ಯ ಕುಡಿಯಲು ಅವಕಾಶ ನೀಡಿ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಎನ್ನುವ ಮಾಹಿತಿ ಮೇರೆಗೆ ವಿಟ್ಲ ಎಸ್ಐ ವಿನೋದ್ ಎಸ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತು.

ಈ ವೇಳೆ, ಪ್ಲಾಸ್ಟಿಕ್ ಲೋಟ, ಮದ್ಯದ ಖಾಲಿಯಾದ ಪ್ಯಾಕೆಟ್, ನೀರು ತುಂಬಿದ 1 ಲೀಟರ್ ಬಾಟಲ್, ಮದ್ಯ ಸೇರಿದಂತೆ ಮೊದಲಾದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು, ಕುಡಿಯಲು ಅವಕಾಶ ಮಾಡಿಕೊಟ್ಟ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details