ಮಂಗಳೂರು: ರೈಲ್ವೆ ನೌಕರರ ಆರೋಗ್ಯ ಕ್ಷಮತೆಯ ಕುರಿತು ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿಯ ಆರೋಗ್ಯ ಘಟಕದಲ್ಲಿ ನಿಯಮಬಾಹಿರವಾಗಿ ನಕಲಿ ಮೆಡಿಕಲ್ ಸರ್ಟಿಫಿಕೇಟ್ ಒದಗಿಸುತ್ತಿದ್ದ ವೈದ್ಯನನ್ನು ಬೆಂಗಳೂರಿನ ಸಿಬಿಐ ಭ್ರಷ್ಟಾಚಾರ ತಡೆ ದಳ ಬಂಧಿಸಿದೆ. ಮಂಗಳೂರಿನ ಇಬ್ರಾಹಿಂ ಬಂಧಿತ ಆರೋಪಿ.
ಈತನನ್ನು ಬಂಧಿಸಿರುವ ಬಗ್ಗೆ ಸಿಬಿಐ ಅಧಿಕಾರಿಗಳು ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ರೈಲ್ವೆಯಲ್ಲಿ ಕೆಲಸ ಮಾಡುವ ನೌಕರರು ಪ್ರತಿ ವರ್ಷಕ್ಕೊಮ್ಮೆ ಫಿಟ್‌ನೆಸ್ ಸರ್ಟಿಫಿಕೇಟ್ ನೀಡಬೇಕು. ಹೀಗಿದ್ದರೆ ಮಾತ್ರವೇ ಅವರಿಗೆ ರೈಲ್ವೆ ನಿಲ್ದಾಣ ಮತ್ತು ರೈಲುಗಳಲ್ಲಿ ಕೆಲಸ ಮಾಡಲು ಬಿಡಲಾಗುತ್ತದೆ.