ಕರ್ನಾಟಕ

karnataka

ETV Bharat / state

ಮಂಗಳೂರು: ಅಕ್ರಮ ಜಾನುವಾರು ಸಾಗಾಟ, ಓರ್ವ ವಶ - ಬಜರಂಗದಳ ಸಂಘಟನೆ

ಅಕ್ರಮ ಜಾನುವಾರು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಮಿನಿ ಟೆಂಪೊ ಹಾಗೂ ಓರ್ವ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Mangalore
ಅಕ್ರಮ ಜಾನುವಾರು ಸಾಗಾಟ

By

Published : Jun 14, 2020, 10:24 AM IST

ಮಂಗಳೂರು:ಅಕ್ರಮ ಜಾನುವಾರು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಇಂದು ನಸುಕಿನ ವೇಳೆ ನಗರದ ಕೊಟ್ಟಾರ ಬಳಿ ದಾಳಿ ನಡೆಸಿ ನಾಲ್ಕು ಕೋಣಗಳನ್ನು ರಕ್ಷಣೆ ಮಾಡಿದ್ದಾರೆ.

ಕೋಣಗಳನ್ನು ಸಾಗಾಟ ಮಾಡಲು ಬಳಸಿದ್ದ ಮಿನಿ ಟೆಂಪೊ ಹಾಗೂ ಓರ್ವ ಆರೋಪಿಯನ್ನು ಪೊಲೀಸರ ವಶಕ್ಕೊಪ್ಪಿಸಲಾಗಿದೆ. ಉಡುಪಿಯಿಂದ ಮಂಗಳೂರಿನ ಕಸಾಯಿಖಾನೆಗೆ ಅಕ್ರಮವಾಗಿ ಕೋಣಗಳನ್ನು ಸಾಗಿಸಲಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಬಜರಂಗದಳ ಸದಸ್ಯರು, ಉರ್ವ ಪೊಲೀಸ್ ಠಾಣೆಯ ಬಳಿ ವಾಹನ ಅಡ್ಡಗಟ್ಟಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು.

ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ABOUT THE AUTHOR

...view details