ಮಂಗಳೂರು:ಸಹಚರರ ಮೂಲಕ ವ್ಯಕ್ತಿಯೋರ್ವನಿಗೆ ಜೀವಬೆದರಿಕೆವೊಡ್ಡಿ, ರಕ್ಷಣೆ ನೀಡುವ ನೆಪದಲ್ಲಿ ಫ್ಲ್ಯಾಟೊಂದರಲ್ಲಿ ಇರಿಸಿ 85 ಲಕ್ಷ ರೂ. ವಸೂಲಿ ಮಾಡಿರುವ ಆರೋಪದ ಮೇಲೆ ದಿವ್ಯದರ್ಶನ್ ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೇರಳದ ಕಡವಂತ ನಗರದ ಮೊಹಮ್ಮದ್ ಹನೀಫ್ ಎಂಬಾತ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ದಿವ್ಯದರ್ಶನ್ ಎಂಬಾತನನ್ನು ಬಂಧಿಸಿದ್ದಾರೆ.
ಪ್ರಕರಣ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾಹಿತಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, 2019-20 ರ ಸಂದರ್ಭ ಆರೋಪಿ ದಿವ್ಯದರ್ಶನ್ ತನ್ನ ಸಹಚರರ ಮೂಲಕ ಮೊಹಮ್ಮದ್ ಹನೀಫ್ಗೆ ಜೀವಬೆದರಿಕೆವೊಡ್ಡಿದ್ದ. ಜೊತೆಗೆ ತಾನೇ ಆತನಿಗೆ ಸಹಕಾರ ನೀಡುವಂತೆ ನಂಬಿಸಿ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಫ್ಲ್ಯಾಟ್ನಲ್ಲಿ ಒಂದೆರಡು ತಿಂಗಳುಗಳ ಕಾಲ ಇರಿಸಿದ್ದ. ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಆಗ ಹನೀಫ್ ಕೇಳಿದಷ್ಟು ಹಣ ನೀಡದಿದ್ದಾಗ ಹಲ್ಲೆ ನಡೆಸಿ, ಶಸ್ತ್ರಾಸ್ತ್ರ ತೋರಿಸಿ ಬೆದರಿಕೆ ಹಾಕಿ ಒಂದು ಬಾರಿ 30 ಲಕ್ಷ ರೂ. ಹಾಗೂ ಮತ್ತೊಂದು ಬಾರಿ 55 ಲಕ್ಷ ರೂ. ಹಣವನ್ನು ವಸೂಲಿ ಮಾಡಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ದಿವ್ಯದರ್ಶನ್ನನ್ನು ಬಂಧಿಸಿದ್ದು, ಆತನ ಸಹಚರರನ್ನು ಶೀಘ್ರದಲ್ಲಿ ಬಂಧಿಸಲಾಗುತ್ತದೆ ಎಂದು ಹೇಳಿದರು.
ಓದಿ:ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿನ ಒಎನ್‌ಜಿಸಿಯಲ್ಲಿ ಭಾರಿ ಅಗ್ನಿ ಅವಘಡ
ಈ ಪ್ರಕರಣದಲ್ಲಿ ಆತ ಮೊಹಮ್ಮದ್ ಹನೀಫ್ನ ತಮ್ಮನ ಹಣಕಾಸಿನ ವ್ಯವಹಾರವನ್ನು ಸರಿಪಡಿಸುತ್ತೇನೆ ಎಂದು 30 ಲಕ್ಷ ರೂ. ಬೇಡಿಕೆ ಇಟ್ಟಿದ್ದ. ಈ 30 ಲಕ್ಷ ರೂ. ಸರಿಯಾದ ಸಮಯಕ್ಕೆ ಕೊಡದೆ ಇದ್ದಾಗ ಹನೀಫ್ನಲ್ಲಿದ್ದ ಜಾಗ್ವಾರ್ ಕಾರನ್ನು ತನ್ನ ವಶದಲ್ಲಿರಿಸಿಕೊಂಡಿದ್ದ. ಆ ಬಳಿಕ ಅದನ್ನು ವಾಪಸ್ ಕೊಟ್ಟಿದ್ದಾನೆ. ಆ ಬಳಿಕ ಮೊಹಮ್ಮದ್ ಹನೀಫ್ನನ್ನು ಫ್ಲ್ಯಾಟ್ನಲ್ಲಿ ಇರಿಸಿದ ಸಂದರ್ಭದಲ್ಲಿ ಕೇಳಿದಷ್ಟು ಹಣ ಕೊಟ್ಟಿಲ್ಲ ಎಂದು ಜಾಗ್ವಾರ್ ಕಾರನ್ನು ಮತ್ತೆ ತೆಗೆದುಕೊಂಡು ತಾನು ಉಪಯೋಗಿಸುತ್ತಿದ್ದ. ಬಳಿಕ ಆ ಕಾರಿನ ಲೋನ್ ಕಟ್ಟಿಲ್ಲ ಎಂದು ಸಂಬಂಧಿಸಿದ ಬ್ಯಾಂಕ್ನವರು ಜಾಗ್ವಾರ್ ಕಾರನ್ನು ಸೀಜ್ ಮಾಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದರು.