ಮಂಗಳೂರು:ಇಲ್ಲಿನ ಮಳಲಿ ಮಸೀದಿಯ ನವೀಕರಣ ಸಂದರ್ಭದಲ್ಲಿ ದೇಗುಲ ಶೈಲಿ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದ ವಿಚಾರಣೆಯನ್ನು ನ್ಯಾಯಾಲಯ ಜೂ.17 ಕ್ಕೆ ಮುಂದೂಡಿದೆ. ಈ ವಿಚಾರವಾಗಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ, ನ್ಯಾಯಾಲಯದ ವ್ಯಾಪ್ತಿಯ ಬಗ್ಗೆ ವಿಚಾರಣೆ ನಡೆಯುತ್ತಿದೆ. ವಿಹೆಚ್ಪಿ ಸಲ್ಲಿಸಿದ ಅರ್ಜಿಯು ಸಿವಿಲ್ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇದು ವಕ್ಪ್ ಕೋರ್ಟ್ನಲ್ಲಿ ವಿಚಾರಣೆಯಾಗಬೇಕು ಮತ್ತು ವಿಹೆಚ್ಪಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸುವಂತೆ ಮಸೀದಿ ಆಡಳಿತ ಮಂಡಳಿ ವಾದಿಸಿತ್ತು.
ಮಳಲಿ ಮಸೀದಿ ವಿವಾದ: ಜೂ.17ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ - ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ
ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಜೂನ್ 17ಕ್ಕೆ ಮುಂದೂಡಿದೆ. ಮಸೀದಿ ಆಡಳಿತ ಮಂಡಳಿಯ ವಾದಕ್ಕೆ ಮಂಗಳವಾರ ವಿಹೆಚ್ಪಿ ಪರ ವಕೀಲರು ವಾದ ಮಂಡಿಸಿದ್ದರು.
ಮಳಲಿ ಮಸೀದಿ ವಿವಾದ
ಈ ಬಗ್ಗೆ ಎರಡು ಕಡೆಯ ವಾದ-ಪ್ರತಿವಾದ ನಡೆದಿತ್ತು. ಮಸೀದಿ ಆಡಳಿತ ಮಂಡಳಿಯ ವಾದಕ್ಕೆ ಮಂಗಳವಾರ ವಿಹೆಚ್ಪಿ ಪರ ವಕೀಲರು ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಜೂ.17 ಕ್ಕೆ ವಿಚಾರಣೆ ಮುಂದೂಡಿದೆ. ಈ ವಿಚಾರದಲ್ಲಿ ಸೋಮವಾರ ಹೈಕೋರ್ಟ್ ಜಿಲ್ಲಾ ಸಿವಿಲ್ ನ್ಯಾಯಾಲಯ ವಿಚಾರಣೆಯನ್ನಷ್ಟೇ ಮಾಡಬೇಕು. ಯಾವುದೇ ಆದೇಶ ನೀಡಬಾರದು ಎಂದು ಸೂಚಿಸಿತ್ತು.
ಇದನ್ನೂ ಓದಿ:ಮಳಲಿ ಮಸೀದಿ ದೇಗುಲ ಶೈಲಿ ಪತ್ತೆ ಪ್ರಕರಣ: ಜೂನ್ 14ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್