ಮಂಗಳೂರು:ಕೊರೊನಾ ವೈರಸ್ ಹಿನ್ನೆಲೆ, ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರ ಈಗಾಗಲೇ 1,610 ಕೋಟಿ ರೂ. ಪರಿಹಾರ ಘೋಷಣೆ ಮಾಡಿದೆ. ಆದರೆ, ಇದರಲ್ಲಿ ಬೀಡಿ ಕಾರ್ಮಿಕರಿಗೆ ಯಾವುದೇ ಪರಿಹಾರ ಘೋಷಣೆಯಾಗಿಲ್ಲ. ಆದ್ದರಿಂದ ಅವರಿಗೆ ಕನಿಷ್ಠ 10 ಸಾವಿರ ರೂ. ಪ್ಯಾಕೇಜ್ ಘೋಷಣೆಯಾಗಲಿ ಎಂದು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾವ್ ಆಗ್ರಹಿಸಿದ್ದಾರೆ.
ಬೀಡಿ ಕಾರ್ಮಿಕರಿಗೆ ಕನಿಷ್ಠ 10 ಸಾವಿರ ರೂ. ಪ್ಯಾಕೇಜ್ ಘೋಷಿಸಿ: ಎಚ್.ವಿ.ರಾವ್ ಆಗ್ರಹ - ದಕ್ಷಿಣಕನ್ನಡದ ಬೀಡಿ ಕಾರ್ಮಿಕರು
ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಬೀಡಿ ಕಾರ್ಮಿಕರಿದ್ದು,ಅವರಿಗೆ ಲಾಕ್ಡೌನ್ ಬಳಿಕ ಕೆಲಸವಿಲ್ಲ. ಆದ್ದರಿಂದ ಬೀಡಿ ಕಾರ್ಮಿಕರಿಗೆ ಕನಿಷ್ಠ 10 ಸಾವಿರ ರೂ. ಪ್ಯಾಕೇಜ್ ಘೋಷಣೆಯಾಗಲಿ ಎಂದು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾವ್ ಆಗ್ರಹಿಸಿದ್ದಾರೆ.
ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಬೀಡಿ ಕಾರ್ಮಿಕರಿದ್ದು, ಅವರಿಗೆ ಲಾಕ್ಡೌನ್ ಬಳಿಕ ಕೆಲಸವಿಲ್ಲ. ಇತ್ತೀಚೆಗೆ ಡಿಸಿಯವರು ಬೀಡಿ ಕಾರ್ಮಿಕರಿಗೆ ಕನಿಷ್ಠ ಅರ್ಧ ಕೆಲಸವಾದರೂ ಕೊಡಬೇಕು ಎಂದು ಹೇಳಿದ್ದರು. ಆದರೆ, ಅದು ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಆದ್ದರಿಂದ ಬೀಡಿ ಕಾರ್ಮಿಕರು ಇನ್ನೂ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಸಿಎಂ ಬೀಡಿ ಕಾರ್ಮಿಕರ ಸಂಕಷ್ಟವನ್ನ ಅರಿತು ಅವರಿಗೆ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಐಟಿಯು ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಜೆ.ಬಾಲಕೃಷ್ಣ ಮಾತನಾಡಿ, ಶೇ. 90ಕ್ಕಿಂತ ಅಧಿಕ ಮಂದಿ ಮಹಿಳಾ ಬೀಡಿ ಕಾರ್ಮಿಕರಾಗಿದ್ದಾರೆ. ಅವರು ಮನೆಯಲ್ಲಿಯೇ ಇದ್ದು ಬೀಡಿ ಕಟ್ಟುವವರು. ಆದರೆ, ಲಾಕ್ಡೌನ್ ಬಳಿಕ ಬೀಡಿ ಕೊಳ್ಳಲಾಗುತ್ತಿಲ್ಲ. ಪರಿಣಾಮ ಅವರ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೇ, ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ನಲ್ಲಿಯೂ ಅವರನ್ನ ಕೈಬಿಡಲಾಗಿದೆ. ಆದ್ದರಿಂದ ಈ ಪ್ಯಾಕೇಜ್ನಲ್ಲಿ ಕನಿಷ್ಠ 10 ಸಾವಿರ ರೂ. ನೀಡಬೇಕು ಎಂದರು.