ಕರ್ನಾಟಕ

karnataka

ETV Bharat / state

ರಾಜಕಾರಣಿಗಳನ್ನು ಮನೆಗೆ ಬಿಟ್ಟುಕೊಳ್ಳಬೇಡಿ: ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ - ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ

ರಾಜಕಾರಣಿಗಳನ್ನು ಮನೆ ಬಾಗಿಲಿಗೆ ಬರಲು ಬಿಡಬೇಡಿ. ಅವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಕರೆ ನೀಡಿದ್ದಾರೆ.

ಮೃತ ಪ್ರವೀಣ್ ತಂದೆಗೆ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದ ಮಹೇಶ್​ ಶೆಟ್ಟಿ ತಿಮರೋಡಿ
ಮೃತ ಪ್ರವೀಣ್ ತಂದೆಗೆ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದ ಮಹೇಶ್​ ಶೆಟ್ಟಿ ತಿಮರೋಡಿ

By

Published : Jul 29, 2022, 10:45 PM IST

ಸುಳ್ಯ:ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ಮನೆಗೆ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಭೇಟಿ ನೀಡಿ ಮೃತ ಪ್ರವೀಣ್ ತಂದೆಗೆ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು.

ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಅವರು ಮಾತನಾಡಿದರು

ಮಾಧ್ಯಮದೊಂದಿಗೆ ಮಾತನಾಡಿದ ಮಹೇಶ್ ಶೆಟ್ಟಿ ಅವರು, ಸುಳ್ಯದಲ್ಲಿ ರಾಜಕಾರಣಿಗಳ ವಿರುದ್ಧ ಕಾರ್ಯಕರ್ತರ ದಂಗೆ ಆರಂಭ ಮಾತ್ರ. ಈ ರಾಜಕಾರಣಿಗಳನ್ನು ಮನೆ ಬಾಗಿಲಿಗೆ ಬರಲು ಬಿಡಬೇಡಿ. ಅವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ. ಇನ್ನಾದರೂ ಇವರಿಗೆ ಪಾಠ ಕಲಿಸಿ ಎಂದರು.

ಕರ್ನಾಟಕದಲ್ಲಿ ಚುನಾವಣೆ ಬರ್ತಿದೆ. ಇನ್ನು ಇಲ್ಲಿ ಕೊಲೆಗಳು ನಡೆಯಬಹುದು ಎಂದು ನಾನು ಈಗಾಗಲೇ ಹೇಳಿಕೆ ನೀಡಿದ್ದೆ. ಇದೀಗ ಅದೇ ತರಹ ಆಗುತ್ತಿದೆ. ಇದು ದಕ್ಷಿಣ ಕನ್ನಡದಲ್ಲಿ ಮಾಮೂಲಿ ಆಗಿಬಿಟ್ಟಿದೆ. ಎಲ್ಲ ರಾಜಕೀಯ ಪಕ್ಷಗಳೂ ಒಂದೇ. ಈ ರಾಜಕೀಯ ವ್ಯವಸ್ಥೆ ಎಂದು ಕೊನೆಯಾಗುವುದಿಲ್ಲವೋ ಅಲ್ಲಿಯ ತನಕ ಇದೇ ಸ್ಥಿತಿ ಇರಲಿದೆ. ಈ ರಾಜಕೀಯ ವ್ಯವಸ್ಥೆಯಲ್ಲಿ ಪಾಪದವರು ಬಲಿಯಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಓದಿ:ರಾಜ್ಯದಲ್ಲಿ 61 ಯೋಜನೆಯ 3,829 ಕೋಟಿ ರೂ. ಬಂಡವಾಳ ಹೂಡಿಕೆ, 19,510 ಉದ್ಯೋಗ ಸೃಷ್ಟಿ: ನಿರಾಣಿ

ABOUT THE AUTHOR

...view details