ಕರ್ನಾಟಕ

karnataka

ETV Bharat / state

ಮಂಗಳೂರು ಗೋಲಿಬಾರ್ ಪ್ರಕರಣ: ಸಾಕ್ಷ್ಯ ನೀಡಲು ಫೆ. 6ರವರೆಗೂ ಅಂತಿಮ ಅವಕಾಶ.. - ಮಂಗಳೂರು ಗೋಲಿಬಾರ್ ಪ್ರಕರಣ

ಮಂಗಳೂರಿನಲ್ಲಿ ನಡೆದ ಗೋಲಿಬಾರ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಸಂಬಂಧಿಸಿ ಮಾಹಿತಿ ಅಥವಾ ಸಾಕ್ಷ್ಯ ನೀಡಲು ಫೆಬ್ರವರಿ 6 ಕಡೆಯ ದಿನವಾಗಿದೆ‌.

manglore golibar case
ಮಂಗಳೂರು ಗೋಲಿಬಾರ್ ಪ್ರಕರಣ

By

Published : Feb 3, 2020, 9:48 PM IST

ಮಂಗಳೂರು: ನಗರದಲ್ಲಿ ಡಿಸೆಂಬರ್‌ 19ರಂದು ನಡೆದ ಹಿಂಸಾಚಾರದಿಂದ ಗೋಲಿಬಾರ್ ನಡೆದು ಇಬ್ಬರು ಮೃತಪಟ್ಟ ಪ್ರಕರಣದ ಬಗ್ಗೆ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಸಂಬಂಧಿಸಿ ಮಾಹಿತಿ ಅಥವಾ ಸಾಕ್ಷ್ಯ ನೀಡಲು ಫೆಬ್ರವರಿ 6 ಕಡೆಯ ದಿನವಾಗಿದೆ‌.

ಅಂದಿನ ಘಟನೆಯ ಬಗ್ಗೆ ಮಾಹಿತಿ ಇದ್ದವರು ಅಥವಾ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಯಾರಾದರೂ ಇದ್ದಲ್ಲಿ ಫೆಬ್ರವರಿ 6ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಸಹಾಯಕ ಆಯುಕ್ತರ ಕೋರ್ಟ್ ಹಾಲ್, ಮಿನಿ ವಿಧಾನಸೌಧ, ಮಂಗಳೂರು ಇಲ್ಲಿಗೆ ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆ ನೀಡಲು ಅಂತಿಮ ಅವಕಾಶ ನೀಡಲಾಗಿದೆ. ತದನಂತರ ಸಾರ್ವಜನಿಕರಿಂದ ಯಾವುದೇ ಸಾಕ್ಷ್ಯ ಅಥವಾ ಹೇಳಿಕೆ ಸ್ವೀಕರಿಸಲಾಗುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಗೋಲಿಬಾರ್ ಪ್ರಕರಣದ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ನಡೆಸಲು ರಾಜ್ಯ ಸರ್ಕಾರ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಜಗದೀಶ ಅವರನ್ನು ನೇಮಿಸಿತ್ತು.

ABOUT THE AUTHOR

...view details