ಕರ್ನಾಟಕ

karnataka

ETV Bharat / state

ಮಂಗಳೂರು: ಮೊದಲ ಬಾರಿಗೆ ದೊಂದಿ ಬೆಳಕಿನಲ್ಲಿ 'ಮ್ಯಾಕ್ ಬೆತ್' ಯಕ್ಷ ರೂಪಕ ಪ್ರದರ್ಶನ - Mangalore

ಮಂಗಳೂರಿನಲ್ಲಿ ಯಕ್ಷಗಾನ ಮಾಮೂಲಿ. ಆದರೆ ಶನಿವಾರ ರಾತ್ರಿ ವಿರಳಾತಿ ವಿರಳವಾಗಿ 'ಮ್ಯಾಕ್ ಬೆತ್' ಯಕ್ಷ ರೂಪಕವು ದೊಂದಿ ಬೆಳಕಿನಲ್ಲಿ ಪ್ರದರ್ಶನಗೊಂಡಿತು.‌

Mangalore
ದೊಂದಿ ಬೆಳಕಿನಲ್ಲಿ 'ಮ್ಯಾಕ್ ಬೆತ್' ಯಕ್ಷ ರೂಪಕ

By

Published : Apr 11, 2021, 4:36 PM IST

ಮಂಗಳೂರು: ಇನ್ನೇನು ಕತ್ತಲು ಆವರಿಸುತ್ತಿದ್ದಂತೆ ನಗರದ ಅಲೋಶಿಯಸ್ ಕಾಲೇಜು ಆವರಣದ ಮದರ್ ತೆರೆಸಾ ಪೀಸ್ ಪಾರ್ಕ್ ರಂಗಮಂಚಿಕೆಯಲ್ಲಿ‌ ದೊಂದಿಗಳು ಬೆಳಗಳಾರಂಭಿಸಿದವು. ಭಾಗವತರು ಪದ್ಯ ಆರಂಭಿಸುತ್ತಿದ್ದಂತೆ ಜಗತ್ತಿನ ಮಹಾನಾಟಕಕಾರ ಷೇಕ್ಸ್‌ಪಿಯರ್​ನ 'ಮ್ಯಾಕ್ ಬೆತ್' ನಾಟಕದ ಪಾತ್ರಗಳು ದೊಂದಿ ಬೆಳಕಿನ ಯಕ್ಷ ರೂಪಕದ ಮೂಲಕ ಯಕ್ಷ ಲೋಕವನ್ನೇ ಸೃಷ್ಟಿಸಿದವು.

ದೊಂದಿ ಬೆಳಕಿನಲ್ಲಿ 'ಮ್ಯಾಕ್ ಬೆತ್' ಯಕ್ಷ ರೂಪಕ

ಹೌದು, ಮಂಗಳೂರಿನಲ್ಲಿ ಯಕ್ಷಗಾನ ಮಾಮೂಲಿ. ಆದರೆ ಶನಿವಾರ ರಾತ್ರಿ ವಿರಳಾತಿ ವಿರಳವಾಗಿ 'ಮ್ಯಾಕ್ ಬೆತ್' ಯಕ್ಷ ರೂಪಕ ದೊಂದಿ ಬೆಳಕಿನಲ್ಲಿ ಪ್ರದರ್ಶನಗೊಂಡಿತು.‌ ಪ್ರೇಕ್ಷಕರು ದೊಂದಿಯ ಉರಿಯ ಹೊಗೆಯ ಘಮವನ್ನು ಆಘ್ರಾಣಿಸುತ್ತಾ 'ಮ್ಯಾಕ್ ಬೆತ್' ಯಕ್ಷ ರೂಪಕವನ್ನು ಆಸ್ವಾದಿಸಿದರು. ಜತೆಗೆ ಯಕ್ಷಗಾನಕ್ಕೆ ಹೊರತಾದ ಪೌರಾಣಿಕ ಪ್ರಸಂಗಕ್ಕೆ ಬದಲಾಗಿ 16ನೇ ಶತಮಾನದ ಪ್ರಸಿದ್ಧ ನಾಟಕ 'ಮ್ಯಾಕ್ ಬೆತ್' ನಾಟಕದ ಕಥಾವಸ್ತುವನ್ನು ಆರಿಸಲಾಗಿದೆ. ಹಲವು ತಲೆಮಾರುಗಳಿಂದ ನಾಟಕಕಾರರನ್ನು, ಚಿತ್ರ ನಿರ್ದೇಶಕರನ್ನು, ಕಥೆಗಾರರನ್ನು ಕಾಡುತ್ತಲೇ ಬಂದು ವೈವಿಧ್ಯಮಯ ರೂಪವನ್ನು ಪಡೆದಿರುವ 'ಮ್ಯಾಕ್ ಬೆತ್' ನಾಟಕ ನಿನ್ನೆ ಯಕ್ಷ ರೂಪಕದ ಮೂಲಕ ಮತ್ತೆ ಪ್ರೇಕ್ಷಕರನ್ನು ಕಾಡಿದೆ.

ಖ್ಯಾತ ಯಕ್ಷಗಾನ ವೇಷಧಾರಿ ಸೂರಿಕುಮೇರು ಕೆ. ಗೋವಿಂದ ಭಟ್ ಈ ಯಕ್ಷ ರೂಪಕವನ್ನು 1977ರಲ್ಲಿಯೇ ರಚಿಸಿದ್ದರು. ಆದರೆ ಈ ಹಿಂದೆ ಎರಡು ಬಾರಿ ಮಾತ್ರ ಪ್ರದರ್ಶನವಾಗಿದ್ದು, ನಿನ್ನೆ ರಾತ್ರಿ ಮೂರನೇಯ ಬಾರಿಗೆ ದೊಂದಿ ಬೆಳಕಿನ ಯಕ್ಷ ರೂಪಕವಾಗಿ ಕಳೆಗಟ್ಟಿತು.

ಮ್ಯಾಕ್ ಬೆತ್ ಪ್ರಸಂಗ ಪುಸ್ತಕವೂ ಕಳೆದು ಹೋಗಿದ್ದು, 1977ರಲ್ಲಿ ಮ್ಯಾಕ್ ಬೆತ್ ಯಕ್ಷಗಾನಕ್ಕೆ ಭಾಗವತಿಕೆ ಮಾಡಿರುವ ಭಾಗವತರಲ್ಲಿ ‌ಇದರ ಪ್ರತಿ ಇತ್ತು. ಈ ಮೂಲಕ ‌ಅದರ ಪ್ರತಿಯನ್ನು ಪಡೆದು 'ಮ್ಯಾಕ್ ಬೆತ್' ಯಕ್ಷ ರೂಪಕ ಪ್ರದರ್ಶಿಸಲಾಯಿತು ಎಂದು ಪ್ರಸಂಗಕರ್ತ ಸೂರಿಕುಮೇರು ಕೆ. ಗೋವಿಂದ ಭಟ್ ನೆನಪಿಸಿದರು.

ABOUT THE AUTHOR

...view details