ಕರ್ನಾಟಕ

karnataka

ETV Bharat / state

ಅನ್ಯ ಕೋಮಿನ ಹುಡುಗ-ಹುಡುಗಿ ಮಧ್ಯೆ ಲವ್​.. ವಿವಾದವೆಬ್ಬಿಸಿದ 18 ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿದ ಕಾಲೇಜ್

ಪ್ರಿತಿ ವಿಚಾರಕ್ಕೆ ಕಾಲೇಜಿನಲ್ಲಿ ಗಲಭೆ ಮಾಡಿದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಪರೀಕ್ಷೆಗೆ ಮಾತ್ರ ಬನ್ನಿ ತರಗತಿಗಳಿಗೆ ಬರಬೇಡಿ ಎಂದು ಹೇಳಿ ಮನೆಗೆ ಕಳಿಸಿದ ಘಟನೆ ನಡೆದಿದೆ.

By

Published : Dec 14, 2022, 11:10 AM IST

Updated : Dec 14, 2022, 11:25 AM IST

Etv Bharat
ಅನ್ಯ ಕೋಮಿನ ವಿದ್ಯಾರ್ಥಿಗಳ ಮಧ್ಯೆ ಲವ್​.

ಬಂಟ್ವಾಳ(ದಕ್ಷಿಣ ಕನ್ನಡ): ಬಂಟ್ವಾಳ ತಾಲೂಕಿನ ವಿಟ್ಲದ ಖಾಸಗಿ ಪದವಿಪೂರ್ವ ಕಾಲೇಜೊಂದರಲ್ಲಿ ಎಡರು ಅನ್ಯ ಕೋಮಿನ ಹುಡುಗ ಮತ್ತು ಹುಡುಗಿ ನಡುವೆ ಪ್ರೇಮಾಂಕುರವಾಗಿದೆ. ಈ ಹುಡುಗಿ ಮತ್ತು ಹುಡುಗನ ನಡುವಿನ ಲವ್ ಮ್ಯಾಟರ್ ಈಗ ಉಳಿದ ವಿದ್ಯಾರ್ಥಿಗಳಿಗೆ ಬಿಸಿಯೇರಿದೆ.

ಈ ವಿಚಾರವಾಗಿ ವಿವಾದ ಎಬ್ಬಿಸಿ ಅಶಾಂತಿ ಉಂಟುಮಾಡಿದ ಆರೋಪದಲ್ಲಿ ಕಾಲೇಜು ಆಡಳಿತ ಮಂಡಳಿ ಸುಮಾರು 18 ವಿದ್ಯಾರ್ಥಿಗಳನ್ನು 'ಇನ್ನು ನೀವು ಕಾಲೇಜಿಗೆ ಬರುವುದು ಬೇಡ, ಪರೀಕ್ಷೆಗೆ ಮಾತ್ರ ಬಂದರೆ ಸಾಕು' ಎಂದು ತಿಳಿಸಿ, ಮನೆಗೆ ಕಳುಹಿಸಿದೆ.

ಪ್ರಕರಣದ ವಿವರಣೆ:ಕೆಲವು ಸಮಯದಿಂದ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ನಡುವೆ ಪ್ರೇಮ ಪ್ರಕರಣವಿದ್ದು, ಗಮನಕ್ಕೆ ಬಂದ ಬಳಿಕ ಕಾಲೇಜು ಆಡಳಿತ ವರ್ಗ ಪೊಷಕರನ್ನು ಕರೆಸಿ ವಿಷಯವನ್ನು ತಿಳಿಸಿತ್ತು. ನಂತರ ಕೆಲವು ಸಮಯ ಯಾವುದೇ ಗೊಂದಲವಿಲ್ಲದೆ ಕಾಲೇಜು ನಡೆಯುತ್ತಿತ್ತು. ವಾರ್ಷಿಕೋತ್ಸವ ಸಮಯ ಮತ್ತೆ ಪ್ರೇಮ ಪ್ರಕರಣ ವಿಚಾರದಲ್ಲಿ ಚರ್ಚೆಗಳು ಆರಂಭವಾಗಿವೆ.

ವಿಷಯ ತಿಳಿಯುತ್ತಿದ್ದಂತೆ ಉಪನ್ಯಾಸಕರ ತಂಡ ತರಗತಿಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವ ಬಗ್ಗೆ ತಪಾಸಣೆಗೆ ಮುಂದಾಗಿದ್ದಾರೆ. ಈ ಸಂದರ್ಭ ಯುವತಿಯ ಕೈಯಲ್ಲಿ ಪ್ರೇಮ ಪತ್ರ ಪತ್ತೆಯಾಗಿತ್ತು. ಆ ದಿನ ಯುವಕ ಕಾಲೇಜಿಗೆ ಬಂದಿರಲಿಲ್ಲ. ಯುವತಿಯ ಪೋಷಕರಲ್ಲಿ ಮಾತುಕತೆ ನಡೆಸಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಯುವತಿಯನ್ನು ಪರೀಕ್ಷೆಗೆ ಮಾತ್ರ ಆಗಮಿಸುವಂತೆ ಸೂಚನೆ ನೀಡಿದ್ದರಂತೆ.

ಪ್ರೀತಿಸಿದ ವಿದ್ಯಾರ್ಥಿ ತರಗತಿಗೆ ಹಾಜರಾಗುತ್ತಿದ್ದಂತೆ ಉಪನ್ಯಾಸಕರುಗಳಿಗೆ ಮಾಹಿತಿ ನೀಡದೆ ಕೆಲವು ಕಾಲೇಜಿನ ಯುವಕರು ಗುಂಪು ಕಟ್ಟಿಕೊಂಡು ಹೋಗಿ ಪ್ರಶ್ನಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಪ್ರೀತಿಸಿದ ವಿದ್ಯಾರ್ಥಿ ಹಾಗೂ ಆತನಿಗೆ ಸಹಕರಿಸಿದ 6ಮಂದಿ ಸ್ನೇಹಿತರು ಮತ್ತು ಗುಂಪು ಕಟ್ಟಿ ಪ್ರಶ್ನಿಸಲು ಹೋದ ವಿದ್ಯಾರ್ಥಿಗಳ ಪೋಷಕರನ್ನು ಕಾಲೆಜು ಆಡಳಿತ ಮಂಡಳಿ ಕರೆಸಿ ವಿಚಾರಣೆ ನಡೆಸಿ ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಕಾಲೇಜಿನ‌ ಕಾರ್ಯಕ್ರಮದಲ್ಲಿ ಬುರ್ಖಾ ಧರಿಸಿ ನೃತ್ಯ: ನಾಲ್ವರು ವಿದ್ಯಾರ್ಥಿಗಳ ಅಮಾನತು

Last Updated : Dec 14, 2022, 11:25 AM IST

ABOUT THE AUTHOR

...view details