ಮಂಗಳೂರು:ನಗರದಲ್ಲಿ ಅನಧಿಕೃತ ಕ್ಯಾಬ್ಗಳ ಸೇವೆ ಅಧಿಕವಾಗಿದ್ದು, ಸರ್ಕಾರ ಖಜಾನೆಗೆ ತುಂಬಲಾರದ ನಷ್ಟ ಉಂಟಾಗುತ್ತಿದೆ. ಇಲ್ಲಿ ಸರ್ಕಾರಕ್ಕೆ ರಾಜಧನ ಪಾವತಿಸಿ ಟೂರಿಸ್ಟ್ ಕಾರು ಚಾಲಕರು ಈ ಸೇವೆ ನೀಡುತ್ತಿದ್ದಾರೆ. ಆದರೆ, ಅವರ ಹೊಟ್ಟೆಗೆ ಅನಧಿಕೃತ ಕ್ಯಾಬ್ ಚಾಲಕರು ಕಲ್ಲು ಹಾಕುತ್ತಿದ್ದಾರೆ.
ಟೂರಿಸ್ಟ್ ವಾಹನಗಳಿಗೆ ಸೆಡ್ಡು ಹೊಡೆಯುತ್ತಿರುವ ಅನಧಿಕೃತ ಕ್ಯಾಬ್ ಸೇವೆ
ವೈಟ್ ಬೋರ್ಡ್ ವಾಹನ ಚಾಲಕರು ಜೀವಿತಾವಧಿಗೆ ಮತ್ತು ಅಧಿಕೃತ ಕ್ಯಾಬ್ ಸೇವೆ ನೀಡುವ ಚಾಲಕರು ವರ್ಷಂ ಪ್ರತಿ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕು. ಹೀಗಾಗಿ, ಅನಧಿಕೃತ ಕ್ಯಾಬ್ ಸೇವೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ನಷ್ಟ ಉಂಟಾಗುತ್ತಿದೆ.
ಅನಧಿಕೃತ ಕ್ಯಾಬ್ ಸೇವೆಯಿಂದ ಸರ್ಕಾರಕ್ಕೆ ನಷ್ಟ
ಅನಧಿಕೃತ ಕ್ಯಾಬ್ಗಳ ಸೇವೆಯಿಂದ ಅಧಿಕೃತ ಕ್ಯಾಬ್ ಸೇವೆ ನೀಡುವ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಕೆಲ ಸಂಸ್ಥೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಅನಧಿಕೃತ ಕ್ಯಾಬ್ ಸೇವೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕಿದೆ. ಈ ಮೂಲಕ ಸರ್ಕಾರಕ್ಕೆ ಆಗುವ ನಷ್ಟ ತಪ್ಪಿಸಬಹುದು.