ಪುತ್ತೂರು: ಇಲ್ಲಿನ ಕಬಕ ಶ್ರೀ ಅಡ್ಯಲಾಯ ದೇವಸ್ಥಾನದ ಬಳಿ ಲಾರಿಯೊಂದರ ಬ್ಯಾಟರಿಯನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.
ಪುತ್ತೂರು: ಲಾರಿ ಬ್ಯಾಟರಿ ಕಳವು ಪ್ರಕರಣ :24 ಗಂಟೆಯೊಳಗೆ ಆರೋಪಿಗಳ ಬಂಧನ - 24 ಗಂಟೆಯೊಳಗೆ ಆರೋಪಿಗಳ ಬಂಧನ
ಲಾರಿ ಬ್ಯಾಟರಿ ಮತ್ತು ಕ್ಯಾಬಿನ್ ಮೇಲಿದ್ದ ಜಾಕ್ ಕಳುವಾಗಿರುವ ಕುರಿತು ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಮ್ಮದ್ ತೌಫಿಕ್ (23) ಹಾಗೂ ಮಹಮ್ಮದ್ ಇಮ್ರಾನ್(24) ಬಂಧಿತ ಆರೋಪಿಗಳು. ಬಂಧಿತರಿಂದ ಬ್ಯಾಟರಿ ಮತ್ತು ಜಾಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಬ್ಯಾಟರಿ ಮತ್ತು ಕ್ಯಾಬಿನ್ ಮೇಲಿದ್ದ ಜಾಕ್ ಕಳವಾಗಿರುವ ಕುರಿತು ನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಮಹಮ್ಮದ್ ಇಮ್ರಾನ್ ಈ ಹಿಂದೆ ಬೈಕ್ ಮತ್ತು ಮುಕ್ರಂಪಾಡಿ ಅಂಗಡಿಯೊಂದರಲ್ಲಿ ತೂಕದ ಸ್ಕೇಲ್ ಕಳವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡು, ಇದೀಗ ಬ್ಯಾಟರಿ ಕಳವಿನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.