ಮಂಗಳೂರು: ನಗರದಲ್ಲಿ ಉಗ್ರ ಸಂಘಟನೆಯ ಪರ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿಯಿಂದ ಪ್ರಚೋದನೆ ಕೊಟ್ಟ ಆರೋಪಿಗಳನ್ನು ಬಂಧಿಸಲು ಲುಕ್ ಔಟ್ ನೋಟಿಸ್ ನೀಡುವ ಚಿಂತನೆಯಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಸೌದಿಯಿಂದ ಪ್ರಚೋದನೆ:

ಈ ಕುರಿತು ಮಾತನಾಡಿದ ಅವರು, ವಿವಾದಿತ ಗೋಡೆ ಬರಹ ಬರೆದ ಆರೋಪಿಗಳಾದ ಮುಹಮ್ಮದ್ ಶಾರಿಕ್ ಮತ್ತು ಮಾಝ್ ಮುನೀರ್ ಅಹಮದ್ನನ್ನು ಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಮುಹಮ್ಮದ್ ಶಾರಿಕ್ಗೆ ತಪ್ಪಿಸಿಕೊಳ್ಳಲು ಆಶ್ರಯ ನೀಡಿದ್ದ ಆತನ ಮಾವ ಸಾದಾತ್ನನ್ನು ಬಂಧಿಸಲಾಗಿತ್ತು. ಆತನಿಗೆ ನ್ಯಾಯಾಲಯ ಜಾಮೀನು ನೀಡಿದೆ. ಪ್ರಕರಣದ ಹಿಂದೆ ಯಾವುದೇ ಸಂಘಟನೆಯ ಕೈವಾಡ ಇರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಕೆಲವರು ಸೌದಿಯಲ್ಲಿ ಕೂತು ಪ್ರಚೋದನೆ ನೀಡಿರುವ ಬಗ್ಗೆ ಮಾಹಿತಿಯಿದೆ. ಅವರ ಬಂಧನಕ್ಕೆ ಲುಕ್ ಔಟ್ ನೋಟಿಸ್ ನೀಡಲಾಗುವುದು ಎಂದರು.
ಇದನ್ನೂ ಓದಿ : ಉಗ್ರರ ಪರ ಗೋಡೆ ಬರಹ ಪ್ರಕರಣ ; ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಕೋರ್ಟ್
ಇನ್ನು ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ವಿಚಾರಣೆಗಾಗಿ ಎನ್ಐಎ ತಂಡ ಬರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.