ಕರ್ನಾಟಕ

karnataka

ETV Bharat / state

ಕೇರಳ-ಕರ್ನಾಟಕ ಗಡಿಭಾಗದ ತಲಪಾಡಿ ಆರ್​ಟಿಒ ಕಚೇರಿಗೆ ಲೋಕಾಯುಕ್ತ ದಾಳಿ

ತಲಪಾಡಿ ಚೆಕ್​ಪೋಸ್ಟ್​ನಲ್ಲಿ ಲಾರಿ ಚಾಲಕರ ಸುಲಿಗೆಯ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Talapadi RTO office
ತಲಪಾಡಿ ಆರ್​ಟಿಒ ಕಚೇರಿ

By

Published : Nov 8, 2022, 6:44 AM IST

ಉಳ್ಳಾಲ: ತಲಪಾಡಿ ಆರ್​ಟಿಒ ಕಚೇರಿಗೆ ಲೋಕಾಯುಕ್ತ ಎಸ್.ಪಿ ಲಕ್ಷ್ಮೀ ಗಣೇಶ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ದಾಖಲೆಗಳನ್ನು ಪರಿಶೀಲಿಸಿದೆ. ಕೇರಳ - ಕರ್ನಾಟಕ ಗಡಿಭಾಗದ ಮೇಲಿನ ತಲಪಾಡಿಯಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ, ತಲಪಾಡಿ ತನಿಖಾ ಠಾಣೆಯಲ್ಲಿ ತನಿಖೆ ನಡೆದಿದೆ. ನಿನ್ನೆ(ಸೋಮವಾರ) ಸಂಜೆ 7 ಗಂಟೆಯ ಸುಮಾರಿಗೆ ತನಿಖಾ ತಂಡ ಆಗಮಿಸಿದ್ದು, ರಾತ್ರಿ 11 ರವರೆಗೂ ಚೆಕ್ ಪೋಸ್ಟ್ ಒಳಗೆ ದಾಖಲೆಗಳನ್ನು ಶೋಧಿಸಿದ್ದಾರೆ. ಲಾರಿ ಚಾಲಕರಿಂದ ಆರ್‌ಟಿಒ ಸಿಬ್ಬಂದಿ ಲಂಚ ಪಡೆಯುವ ಕುರಿತು ಸಾರ್ವಜನಿಕರು ದೂರು ನೀಡಿದ್ದರು.

ABOUT THE AUTHOR

...view details