ಮಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡಿರುವ ಆದೇಶಕ್ಕೆ ಜನರು ಸ್ಪಂದನೆ ನೀಡಿದ್ದು ಇಂದು ನಗರ ಸಂಪೂರ್ಣ ಸ್ತಬ್ಧವಾಗಿದೆ.
ಕೊರೊನಾ ಭೀತಿ: ಮಂಗಳೂರು ಲಾಕ್ ಡೌನ್, ಸಂಪೂರ್ಣ ಸ್ತಬ್ಧ - lockdown in mangalore
ಮಂಗಳೂರು ನಿನ್ನೆಯಿಂದಲೇ ಲಾಕ್ ಡೌನ್ ಆಗಿದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದರು. ಖಾಸಗಿ ವಾಹನಗಳಲ್ಲಿ ನಿನ್ನೆ ಸಾಕಷ್ಟು ಸಂಖ್ಯೆಯಲ್ಲಿ ಜನರು ತಿರುಗಾಡುತ್ತಿರುವುದು ಕಂಡು ಬಂದಿದ್ದರೆ. ಇವತ್ತು ಜನರ ಓಡಾಟ ಸಂಪೂರ್ಣ ಕಡಿಮೆಯಾಗಿದೆ.
![ಕೊರೊನಾ ಭೀತಿ: ಮಂಗಳೂರು ಲಾಕ್ ಡೌನ್, ಸಂಪೂರ್ಣ ಸ್ತಬ್ಧ lockdown-in-mangalore](https://etvbharatimages.akamaized.net/etvbharat/prod-images/768-512-6523982-thumbnail-3x2-sanju.jpg)
ಕೊರೊನಾ ಭೀತಿ: ಮಂಗಳೂರು ಲಾಕ್ ಡೌನ್, ಸಂಪೂರ್ಣ ಸ್ಥಬ್ಧ
ಕೊರೊನಾ ಭೀತಿ: ಮಂಗಳೂರು ಲಾಕ್ ಡೌನ್, ಸಂಪೂರ್ಣ ಸ್ತಬ್ಧ
ಜಿಲ್ಲೆಯೂ ನಿನ್ನೆಯಿಂದಲೇ ಲಾಕ್ ಡೌನ್ ಆಗಿದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದರು. ಖಾಸಗಿ ವಾಹನಗಳಲ್ಲಿ ನಿನ್ನೆ ಸಾಕಷ್ಟು ಸಂಖ್ಯೆಯಲ್ಲಿ ಜನರು ತಿರುಗಾಡುತ್ತಿರುವುದು ಕಂಡು ಬಂದಿದ್ದರೆ. ಇವತ್ತು ಜನರ ಓಡಾಟ ಕಡಿಮೆಯಾಗಿದೆ.
ದ.ಕ ಜಿಲ್ಲಾಡಳಿತ ಇಂದು ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ದಿನಸಿ ಸಾಮಗ್ರಿಗಳ ಖರೀದಿಗೆ ಅವಕಾಶ ಇದ್ದುದರಿಂದ ಈ ಸಂದರ್ಭದಲ್ಲಿ ಕೆಲ ಸಂಖ್ಯೆಯಲ್ಲಿ ಜನರು ಸಾಮಾಗ್ರಿ ಖರೀದಿಗೆ ಬಂದಿರುವುದು ಕಂಡು ಬಂತು. ಇದೇ ವೇಳೆ ಪೊಲೀಸರು ಜನರು ಹೆಚ್ಚು ಸೇರದಂತೆ ಎಚ್ಚರಿಕೆ ವಹಿಸಿದ್ದು ಕಂಡು ಬಂತು.