ಕರ್ನಾಟಕ

karnataka

ETV Bharat / state

ಲಾಕ್​​ಡೌನ್​ ನಡುವೆ ಸರಳವಾಗಿ ನೆರವೇರಿದ ಪುತ್ತೂರು ಜಾತ್ರಾ ಮಹೋತ್ಸವ - dakshina kananda

ಪ್ರತಿ ವರ್ಷದಂತೆ ಅದ್ಧೂರಿಯಾಗಿ ನಡೆಯಬೇಕಾಗಿದ್ದ ಪುತ್ತೂರು ಮಹಾಲಿಂಗೇಶ್ವರ ದೇವಳದ ವಾರ್ಷಿಕ ಮಹೋತ್ಸವ ಕೊರೊನಾದಿಂದಾಗಿ ಸರಳವಾಗಿ ನೆರವೇರಿತು. ವಾರ್ಷಿಕ ಮಹೋತ್ಸವ ಏಪ್ರಿಲ್ 10ರಂದು ಬೆಳಗ್ಗೆ ಪ್ರತಿವರ್ಷ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಭಕ್ತರ ಸಂದಣಿ ದೇವಾಲಯದಲ್ಲಿ ತುಂಬಿ ತುಳುಕುತ್ತಿತ್ತು. ಆದರೆ ಈ ಬಾರಿ ಕೊರೊನಾ ಭೀತಿಯಿಂದಾಗಿ ಜಾರಿಗೊಂಡಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇವಾಲಯದ ಕೊಡಿ (ಧ್ವಜಾರೋಹಣ) ಏರಿಸುವ ಕಾರ್ಯ ಅತ್ಯಂತ ಸರಳವಾಗಿ ಸಾಂಪ್ರದಾಯಿಕವಾಗಿ ನಡೆಸಲಾಯಿತು.

lockdown effect: putturu festival done by simple way because of Corona
ಲಾಕ್​​ಡೌನ್​ ಎಫೆಕ್ಟ್​​: ಸರಳವಾಗಿ ನೆರವೇರಿದ ಪುತ್ತೂರಿನ ಜಾತ್ರಾ ಮಹೋತ್ಸವ

By

Published : Apr 10, 2020, 6:35 PM IST

ಪುತ್ತೂರು (ದಕ್ಷಿಣ ಕನ್ನಡ): ಪುತ್ತೂರು ಮಹಾಲಿಂಗೇಶ್ವರ ದೇವಳದ ಶತಮಾನಗಳ ಚರಿತ್ರೆಯಲ್ಲಿಯೇ ಮೊತ್ತ ಮೊದಲ ಬಾರಿಗೆ ವಾರ್ಷಿಕ ಮಹೋತ್ಸವಕ್ಕೆ ಪೂರ್ವಶಿಷ್ಟ ಸಂಪ್ರದಾಯದಂತೆ ಧ್ವಜಾರೋಹಣ ಕಾರ್ಯವನ್ನು ದೇವಾಲಯದ ತಂತ್ರಿಗಳು, ಅರ್ಚಕರು ಹಾಗೂ ದೇವಾಲಯದ ನೌಕರರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಲಾಕ್​​ಡೌನ್​ ಎಫೆಕ್ಟ್​​: ಸರಳವಾಗಿ ನೆರವೇರಿದ ಪುತ್ತೂರಿನ ಜಾತ್ರಾ ಮಹೋತ್ಸವ

ವಾರ್ಷಿಕ ಮಹೋತ್ಸವ ಏಪ್ರಿಲ್ 10ರಂದು ಬೆಳಗ್ಗೆ ಪ್ರತಿವರ್ಷ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಭಕ್ತರ ಸಂದಣಿ ದೇವಾಲಯದಲ್ಲಿ ತುಂಬಿ ತುಳುಕುತ್ತಿತ್ತು. ಆದರೆ ಈ ಬಾರಿ ಕೊರೊನಾ ಭೀತಿಯಿಂದಾಗಿ ಜಾರಿಗೊಂಡಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇವಾಲಯದ ಕೊಡಿ (ಧ್ವಜಾರೋಹಣ) ಏರಿಸುವ ಕಾರ್ಯ ಅತ್ಯಂತ ಸರಳವಾಗಿ ಸಾಂಪ್ರದಾಯಿಕವಾಗಿ ನಡೆಸಲಾಯಿತು.

ದೇವಾಲಯದ ಸೀಮಿತ ವರ್ಗದ ಅರ್ಚಕರು, ಬ್ರಹ್ಮವಾಹಕರು ಮತ್ತು ದೇವಳದ ಸಾಂಪ್ರದಾಯಿಕ ಕಾರ್ಯಕರ್ತರನ್ನು ಹೊರತು ಪಡಿಸಿ ದೇವಾಲಯದ ಅಂಗಣಕ್ಕೆ ಯಾರಿಗೂ ಪ್ರವೇಶವಿರಲಿಲ್ಲ. ಭಕ್ತ ಸಮುದಾಯಕ್ಕೆ ದೇವಳದ ವಠಾರ ಹಾಗೂ ದೇವರಮಾರು ಗದ್ದೆಗೂ ಬರದಂತೆ ನಿರ್ಬಂಧಿಸಲಾಗಿತ್ತು. ದೇವಳದ ಆಡಳಿತಾಧಿಕಾರಿ ಲೋಕೇಶ್ ಸಿ, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಶಾಸಕ ಸಂಜೀವ ಮಠಂದೂರು, ದೇವಳದ ವಾಸ್ತು ಶಿಲ್ಪಿ ಪಿ.ಜಿ.ಜಗನ್ನಿವಾಸ ರಾವ್, ಪ್ರೀತಂ ಪುತ್ತೂರಾಯ, ಗುರು ತಂತ್ರಿ, ಪ್ರಧಾನ ಅರ್ಚಕರಾದ ವಿ.ಎಸ್ ಭಟ್ ಮತ್ತು ವಸಂತ ಕೆದಿಲಾಯ ಇದ್ದರು.

ಈ ವರ್ಷ ಭಕ್ತರ ಸುವಸ್ತು ಸಮರ್ಪಣೆಗೆ ಅವಕಾಶ ನಿರಾಕರಿಸಲಾಗಿತ್ತು. ಹಾಗಾಗಿ ಸಾಂಕೇತಿಕವಾಗಿ ಬಾಳೆಯ ಗಿಡ, ಮಾವಿನ ಚಿಗುರು, ಮಾವಿನ ಕಾಯಿ, ಗುಜ್ಜೆ, ಬಾಳೆಕಾಯಿಯನ್ನು ದೇವಳದ ನೌಕರರೇ ಕಟ್ಟುವ ಮೂಲಕ ಧ್ವಜಸ್ತಂಭದ ಪೀಠವನ್ನು ಅಲಂಕರಿಸಲಾಯಿತು. ಫಲವಸ್ತುಗಳಿಂದ ಶೋಭಿಸುತ್ತಿದ್ದ ಧ್ವಜಪೀಠ ಈ ಬಾರಿ ಬಿಕೋ ಅನ್ನುವಂತಿತ್ತು. ಪತ್ರಕರ್ತರಿಗೂ ಅವಕಾಶ ನಿರ್ಬಂಧ ಪ್ರತಿ ವರ್ಷವೂ ಅದ್ದೂರಿ ಪುತ್ತೂರು ಜಾತ್ರೆಯ ವರದಿಯನ್ನು ಮಾಡುತ್ತಿದ್ದ ಪುತ್ತೂರು ಪತ್ರಕರ್ತರನ್ನು ಈ ಬಾರಿ ಧ್ವಜಾರೋಹಣ ಸಂದರ್ಭದಲ್ಲಿ ದೇವಾಲಯದ ಅಂಕಣಕ್ಕೆ ಪ್ರವೇಶ ನಿಷೇಧಿಸಲಾಗಿತ್ತು.

ಈ ನಡುವೆ ಉತ್ಸವಮೂರ್ತಿಯನ್ನು ಹೊರುವ ಅರ್ಚಕರ ವಿರುದ್ಧ ಪುತ್ತೂರಿನ ಹಿರಿಯ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಆದರೆ, ಈ ದೂರು ನಿರ್ಲಕ್ಷಿಸಿ ಧ್ವಜಾರೋಹಣ ಸಂದರ್ಭ ಅದೇ ಅರ್ಚಕರಿಂದ ಉತ್ಸವ ಮೂರ್ತಿ ಹೊರುವ ಕೆಲಸ ನಡೆಸಲಾಗಿತ್ತು.

ABOUT THE AUTHOR

...view details