ಬೆಳ್ತಂಗಡಿ: ಲಾಕ್ಡೌನ್ನಿಂದ ಎಲ್ಲಾ ವಲಯಗಳು ನಷ್ಟದಲ್ಲಿದ್ದು, ಜಿಲ್ಲೆಯಲ್ಲಿ ಸುಮಾರು 80 ಎಕರೆ ಪ್ರದೇಶದಲ್ಲಿ ಬೆಳೆದ ಅನಾನಸ್ಗೆ ಮಾರುಕಟ್ಟೆ ಇಲ್ಲದೆ ರೈತನೊಬ್ಬ ಕಂಗಾಲಾಗಿದ್ದಾನೆ.
ಲಾಕ್ಡೌನ್ ಎಫೆಕ್ಟ್: 80 ಎಕರೆ ಜಮೀನಿನಲ್ಲಿ ಅನಾನಸ್ ಬೆಳೆದ ರೈತ ಕಂಗಾಲು
ಕೊರೊನಾದಿಂದ ದೇಶದ ಆರ್ಥಿಕತೆ ಸಾಕಷ್ಟು ನಷ್ಟ ಅನುಭವಿಸುತ್ತಿದ್ದು, ಯಾವುದೇ ಮಾರುಕಟ್ಟೆ ವ್ಯವಸ್ಥೆಯಿಲ್ಲದೇ ಬೆಳೆಗಾರರು, ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ. ಬೆಳ್ತಂಗಡಿಯಲ್ಲಿ ಸುಮಾರು 80 ಎಕರೆ ಪ್ರದೇಶದಲ್ಲಿ ಬೆಳೆದಿರುವ ಅನಾನಸ್ ಮಾರುಕಟ್ಟೆ ಇಲ್ಲದೇ ರೈತ ಕಂಗಾಲಾಗಿದ್ದಾನೆ.
ಕೇರಳ ಮೂಲದ ಶೈಜು ಎಂಬುವವರು ಕಕ್ಕಿಂಜೆ ಅಸುಪಾಸಿನಲ್ಲಿ ಕೆಲವು ಜನರಿಂದ ಜಾಗಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದ ಸುಮಾರು 80 ಎಕರೆ ಪ್ರದೇಶದಲ್ಲಿ ವ್ಯವಸ್ಥಿತ ರೀತಿಯಲ್ಲಿ ಅನಾನಸ್ ಬೆಳೆ ಬೆಳೆದಿದ್ದಾರೆ. ಬೆಳೆ ಚೆನ್ನಾಗಿ ಬಂದು ಕಟಾವಿಗೆ ಬಂದಿದೆ. ಆದರೆ ಲಾಕ್ಡೌನ್ನಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಾಗಿದೆ. ಪ್ರತಿ ಬಾರಿ ಇವರು ಬೆಳೆದ ಅನಾನಸ್ಗಳನ್ನು ದೆಹಲಿ, ಪೂನಾ, ಮುಂಬೈ, ಜೈಪುರ, ಅಲಹಾಬಾದ್ ಹಾಗೂ ಇನ್ನಿತರ ಕಡೆಗಳಿಗೆ ಸಾಗಿಸಿ ಲಾಭ ಪಡೆಯುತ್ತಿದ್ದರು. ಪ್ರತಿ ಬಾರಿ ಕೆಜಿಗೆ 40ರಿಂದ 50 ರೂ.ವರೆಗೆ ಮಾರಾಟವಾಗುತ್ತಿದ್ದ ಹಣ್ಣುಗಳನ್ನು ಈ ಬಾರಿ ಕೇಳುವವರಿಲ್ಲದಂತಾಗಿದೆ.
ಲಾಕ್ಡೌನ್ನಿಂದ ಸಾಗಣೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ. ದೊಡ್ಡ ಮೊತ್ತದ ಬ್ಯಾಂಕ್ ಸಾಲ ಮಾಡಿ ಈ ಬೆಳೆ ಬೆಳೆದಿರುವ ರೈತ ಈಗ ಕಣ್ಣೀರಿಡುವ ಸ್ಥಿತಿ ಎದುರಾಗಿದೆ.