ಕರ್ನಾಟಕ

karnataka

ಸಂಕಷ್ಟದ ಸಮಯದಲ್ಲಿ ಮಾನವೀಯತೆ: ಮಿತ್ತಬೈಲ್ ಮಸೀದಿ ಅಧೀನದ ಅಂಗಡಿಗಳ ಬಾಡಿಗೆ ಮನ್ನಾ

ಮುಹಿಯುದ್ದೀನ್ ಜುಮ್ಮಾ ಮಸೀದಿ ಮಿತ್ತಬೈಲ್ ಅಧೀನಕ್ಕೊಳಪಟ್ಟ ಅಂಗಡಿಗಳ ಒಂದು ತಿಂಗಳ ಬಾಡಿಗೆ ಮನ್ನಾ ಮಾಡಿ ಮಸೀದಿಯ ಆಡಳಿತ ಕಮಿಟಿ ಆದೇಶಿಸಿದೆ.

By

Published : Jun 7, 2020, 10:03 AM IST

Published : Jun 7, 2020, 10:03 AM IST

Masjid
Masjid

ಬಂಟ್ವಾಳ: ಲಾಕ್‌ಡೌನ್ ಬಳಿಕ ವ್ಯಾಪಾರದಲ್ಲಿ ಕುಂಠಿತವಾದ ಹಿನ್ನೆಲೆಯಲ್ಲಿ ಜೋಡುಮಾರ್ಗದ ಪ್ರಸಿದ್ಧ ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಅಧೀನದ ಬಾಡಿಗೆ ಅಂಗಡಿಗಳ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿ ಆಡಳಿತ ಸಮಿತಿ ಆದೇಶ ಹೊರಡಿಸಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್‌ ತಿಂಗಳ ಬಾಡಿಗೆಯನ್ನು ಮನ್ನಾ ಮಾಡಲು ತೀರ್ಮಾನಿಸಿರುವ ತಾಲೂಕಿನ ಪ್ರಸಿದ್ಧ ಮಸೀದಿಯ ಆಡಳಿತ ಮಂಡಳಿ, ಸಂಕಷ್ಟದಲ್ಲಿರುವ ಬಾಡಿಗೆದಾರರಿಗೆ ನೆರವಾಗಿದೆ. 20 ಅಂಗಡಿಗಳ ಒಂದು ಲಕ್ಷ ರೂಪಾಯಿಗೂ ಅಧಿಕ ಬಾಡಿಗೆಯನ್ನು ಮನ್ನಾಗೊಳಿಸಿದ್ದಾರೆ ಸಂಕಷ್ಟಕ್ಕೆ ನೆರವಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಅಂಗಡಿಗಳ ಮಾಲೀಕರು ಕೂಡ ವ್ಯಾಪಾರವಿವಿಲ್ಲದೆ ಸಮಸ್ಯೆಯಲ್ಲಿದ್ದಾರೆ. ಹೀಗಾಗಿ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಮಸೀದಿಯ ಅಧೀನಕ್ಕೊಳಗಾದ ಎಲ್ಲಾ ಅಂಗಡಿಗಳ ಒಂದು ತಿಂಗಳ ಬಾಡಿಗೆ ನೀಡುವುದು ಬೇದ ಎಂದು ತಿಳಿಸಲಾಗಿದೆ. ಮಹಾಮಾರಿ ವೈರಾಣುವಿನ ಆರ್ಭದಿಂದ ವಿಶ್ವ ಆದಷ್ಟು ಬೇಗ ಮುಕ್ತವಾಗಲು ಪ್ರಾರ್ಥಿಸೋಣ ಎಂದು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಎ.ಕೆ.ಅಬ್ದುಲ್ ಹಮೀದ್ ಹಾಜಿ ತಿಳಿಸಿದರು.

ABOUT THE AUTHOR

...view details