ಬಂಟ್ವಾಳ (ದ.ಕ.): ಕೊರೊನಾ ಹಿನ್ನೆಲೆಯಲ್ಲಿ ತನ್ನ ಕಚೇರಿಯನ್ನೇ ಸಹಾಯವಾಣಿ ಕೇಂದ್ರ ಮಾಡಿ ಸುಮಾರು 30 ಮಂದಿಯನ್ನು ಕಳೆದ ನಾಲ್ಕು ದಿನಗಳ ಹಿಂದೆಯೇ ನಿಯುಕ್ತಿಗೊಳಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮನೆಯಲ್ಲಿದ್ದುಕೊಂಡು ಅಗತ್ಯ ಸೂಚನೆಗಳನ್ನು ನೀಡುತ್ತಿದ್ದಾರೆ.
ಕೃಷಿಕನಾದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ - ಬಂಟ್ವಾಳ
ಅನಾವಶ್ಯಕವಾಗಿ ಬೀದಿಗಿಳಿಯುವ ಬದಲು ಮನೆಯಲ್ಲೇ ಉಳಿದು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಮುಕ್ತ ಅವಕಾಶ ನೀಡಿ ಎಂದು ಬಂಟ್ವಾಳ ಶಾಸಕರು ಕರೆ ನೀಡಿದ್ದಾರೆ.
ಪ್ರಧಾನಿ ಸಲಹೆ ಪಾಲನೆಗಾಗಿ ಮನೆಯಿಂದಲೇ ಕಾರ್ಯಚಟುವಟಿಕೆ ನಡೆಸುತ್ತೇನೆ ಎನ್ನುತ್ತಾರೆ ಅವರು. ಕ್ಷೇತ್ರದಲ್ಲಿರುವ ಸಾರ್ವಜನಿಕರ ಸಂಕಷ್ಟಗಳಿಗೆ ವಾರ್ ರೂಮ್ ಮಾಡಲಾಗಿದ್ದು, ದೂರವಾಣಿ ಮೂಲಕ ಸೂಚನೆ ನೀಡುತ್ತಿದ್ದೇನೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಕೃಷಿಕನಾದ ನಾನು ಮನೆಯ ತೋಟದಲ್ಲಿ ಸಾವಯವ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ 340 ಕ್ಕೂ ಆಶಾ ಕಾರ್ಯಕರ್ತೆಯರು ದಿನವಿಡಿ ತಮ್ಮ ಆರೋಗ್ಯದ ಕಾಳಜಿಯನ್ನು ಬದಿಗೆ ಸರಿಸಿ ಜನರಿಗಾಗಿ ಗ್ರಾಮದ ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಿ ಜನರು ಹೊರಬರದಂತೆ ಕೊರೊನೊ ಮುಂಜಾಗ್ರತಾ ಕ್ರಮಗಳ ಮಾಹಿತಿ ನೀಡುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆ ಯರ ಪರಿಶ್ರಮ ವನ್ನು ಅಭಿನಂದಿಸುತ್ತೇನೆ ಎಂದು ಹೇಳಿರುವ ರಾಜೇಶ್ ನಾಯ್ಕ್ ಪ್ರತಿಯೊಬ್ಬರೂ ಆಶಾ ಕಾರ್ಯಕರ್ತೆಯರಿಗೆ ಕರೆ ಮಾಡಿ ಅವರೊಂದಿಗೆ ಸಂಭಾಷಿಸಿದ್ದಾರೆ.