ಬೆಳ್ತಂಗಡಿ: ತೀವ್ರ ಸಂಕಷ್ಟದಲ್ಲಿರುವ ತಾಲೂಕಿನ 600 ಬಡ ಬಂಟ ಕುಟುಂಬಗಳಿಗೆ ಆಹಾರ ವಸ್ತುಗಳ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಗುರುವಾಯನಕೆರೆ ಬಂಟರ ಭವನದಲ್ಲಿ ಶಾಸಕ ಹರೀಶ್ ಪೂಂಜ ಸಾಂಕೇತಿಕವಾಗಿ ಚಾಲನೆ ನೀಡಿದ್ದಾರೆ.
ಬೆಳ್ತಂಗಡಿಯಲ್ಲಿ ಲಾಕ್ಡೌನ್... ಆಹಾರ ಸಾಮಗ್ರಿಗಳ ಕಿಟ್ ವಿತರಣೆಗೆ ಸಾಂಕೇತಿಕ ಚಾಲನೆ - ದಿನಬಳಕೆಯ ವಸ್ತುಗಳ ಖರೀದಿಗೂ ಸಂಕಷ್ಟವೆದುರಿಸುತ್ತಿರುವ ಸುಮಾರು 600 ಬಡ ಕುಟುಂಬ
ಬೆಳ್ತಂಗಡಿಯಲ್ಲಿ ದಿನಬಳಕೆಯ ವಸ್ತುಗಳ ಖರೀದಿಗೂ ಸಂಕಷ್ಟ ಎದುರಿಸುತ್ತಿದ್ದ ಸುಮಾರು 600 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಕೊರೊನಾ ಸೋಂಕಿನ ವಿರುದ್ಧದ ಹೋರಾಟದ ಭಾಗವಾಗಿ ಇಡೀ ಊರಿಗೆ ಊರೇ ಲಾಕ್ಡೌನ್ ಆಗಿದ್ದು, ಜನಸಾಮಾನ್ಯರು ದಿನಬಳಕೆಯ ವಸ್ತುಗಳ ಖರೀದಿಗೂ ಸಂಕಷ್ಟವೆದುರಿಸುತ್ತಿರುವುದನ್ನು ಮನಗಂಡ ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ನೇತೃತ್ವದಲ್ಲಿ ಬರೋಡದ ಉದ್ಯಮಿ- ಗುರುವಾಯನಕೆರೆ ನವಶಕ್ತಿ ನಿವಾಸಿ ಶಶಿಧರ ಶೆಟ್ಟಿಯವರ ಸಹಕಾರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ, ನಿರ್ದೇಶಕರಾದ ಕೃಷ್ಣ ರೈ, ಪುಷ್ಪರಾಜ ಶೆಟ್ಟಿ, ಪ್ರಕಾಶ್ ಶೆಟ್ಟಿ ನೊಚ್ಚ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ಸಂಘದ ಪದಾಧಿಕಾರಿಗಳಾದ ಆನಂದ ಶೆಟ್ಟಿ, ಉಮೇಶ್ ಶೆಟ್ಟಿ, ಸುರೇಶ್ ಶೆಟ್ಟಿ ಲಾಯ್ಲ, ಚಂದ್ರಮೋಹನ್ ರೈ, ಮೀನಾಕ್ಷಿ ಶೆಟ್ಟಿ ಪಡಂಗಡಿ, ಅಜಿತ್ ಶೆಟ್ಟಿ ಕೋರ್ಯಾರು, ಕಿರಣ್ ಕುಮಾರ್ ,ವೆಂಕಟರಮಣ ಶೆಟ್ಟಿ ಉಜಿರೆ ಮತ್ತಿತರರು ಹಾಜರಿದ್ದರು.