ಸುಳ್ಯ: ಕೊರೊನಾ ಪಾಸಿಟಿವ್ ಬಂದು ಮೃತರಾದ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಲು ತೆರಳಿದ್ದ ವೇಳೆ ಅಲ್ಲಿನ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಬೆಳ್ಳಾರೆ ತಡಗಜೆಯ ವ್ಯಕ್ತಿಯೋರ್ವರು ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಇವರ ಕೊರೊನಾ ವರದಿಯು ಪಾಸಿಟಿವ್ ಆಗಿತ್ತು.
ಇವರ ಅಂತ್ಯಸಂಸ್ಕಾರವನ್ನು ಬೆಳ್ಳಾರೆ ಗೌರಿಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿಸಲು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ನಿರ್ಧರಿಸಿ ಗೌರಿಹೊಳೆಗೆ ಬಂದು ಸಿದ್ಧತೆ ಮಾಡ ತೊಡಗಿದರು.
ಕೊರೊನಾ ರೋಗಿಯ ಮೃತದೇಹವನ್ನು ಇಲ್ಲಿಯ ಸ್ಮಶಾನಕ್ಕೆ ತರುತ್ತಾರೆಂಬ ಮಾಹಿತಿ ದೊರೆತ ತಕ್ಷಣ ಸ್ಥಳೀಯ ನಿವಾಸಿಗಳು ಸೇರಿ, ಮೃತದೇಹವನ್ನು ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದು.
ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಶವಸಂಸ್ಕಾರಕ್ಕೆ ಸ್ಥಳೀಯರ ವಿರೋಧ ಇಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ, ರುದ್ರಭೂಮಿ ಅಭಿವೃದ್ಧಿಯಾಗಿಲ್ಲ. ಆದುದರಿಂದ ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದೆಂದು ವಿರೋಧ ವ್ಯಕ್ತಪಡಿಸಿದರು.
ಬೆಳ್ಳಾರೆ ಪೊಲೀಸರು ಸೇರಿದಂತೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಮನವೊಲಿಸಲು ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ. ಕೊನೆಗೆ ಮೃತ ವ್ಯಕ್ತಿಯ ಮನೆಯವರು ಮೃತದೇಹದ ಹೆಸರಿನಲ್ಲಿ ಗಲಾಟೆ ಮಾಡಬೇಡಿ.
ಅಂತ್ಯಸಂಸ್ಕಾರ ಬೇರೆ ಕಡೆ ಮಾಡಿಸಿ ಎಂದು ವಿನಂತಿಸಿದ್ದಾರೆ. ನಂತರದಲ್ಲಿ ಮೃತ ದೇಹವನ್ನು ಸುಳ್ಯ ಬಳಿಯ ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲು ಹಿಂದೂ ರುದ್ರ ಭೂಮಿಗೆ ಕೊಂಡೊಯ್ದು ಅಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.