ಕರ್ನಾಟಕ

karnataka

By

Published : Feb 2, 2021, 4:45 PM IST

ETV Bharat / state

ಆಹಾರ ಖಾದ್ಯದಲ್ಲಿ ಜೀವಂತ ಹುಳು ಪತ್ತೆ: ಚಿಕ್ ಕಿಂಗ್​ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ

'ಚಿಕ್ ಕಿಂಗ್ ಇಟ್ಸ್ ಮೈ ಚಾಯ್ಸ್' ಸಂಸ್ಥೆ ಮೇಲೆ ಇಂದು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದು, ಆಹಾರದ ಗುಣಮಟ್ಟವನ್ನು ಪರಿಶೀಲಿಸಿದ್ರು. ಅಲ್ಲದೆ ಸಂಸ್ಥೆಯಲ್ಲಿದ್ದ ಕಳಪೆ ಗುಣಮಟ್ಟದ, ಅವಧಿ ಮುಗಿದಿರುವ ಆಹಾರ ಪದಾರ್ಥಗಳನ್ನು ಮುಟ್ಟುಗೋಲು ಹಾಕಲಾಯಿತು‌.

ಚಿಕ್ ಕಿಂಗ್​ಗೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ
ಚಿಕ್ ಕಿಂಗ್​ಗೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ

ಮಂಗಳೂರು: ಮಹಿಳೆಯರು ಖರೀದಿಸಿರುವ ಆಹಾರ ಖಾದ್ಯದಲ್ಲಿ ಜೀವಂತ ಹುಳು ಕಾಣಿಸಿಕೊಂಡಿರುವ ಹಿನ್ನೆಲೆ ನಗರದ 'ಚಿಕ್ ಕಿಂಗ್ ಇಟ್ಸ್ ಮೈ ಚಾಯ್ಸ್' ಸಂಸ್ಥೆ ಮೇಲೆ ಇಂದು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ ಕಿಂಗ್​ ಸಂಸ್ಥೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ

ಆರು ಮಂದಿ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಸಂದರ್ಭ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಲಾಯಿತು. ಅಲ್ಲದೆ ಸಂಸ್ಥೆಯಲ್ಲಿದ್ದ ಕಳಪೆ ಗುಣಮಟ್ಟದ, ಅವಧಿ ಮುಗಿದಿರುವ ಆಹಾರ ಪದಾರ್ಥಗಳನ್ನು ಮುಟ್ಟುಗೋಲು ಹಾಕಲಾಯಿತು‌.

ಓದಿ: ಸಿಸಿಬಿ ವಶದಲ್ಲಿದ್ದ ಐಷಾರಾಮಿ ಕಾರು ನಾಪತ್ತೆ: ಅಧಿಕಾರಿಯೇ ಮಾರಾಟ ಮಾಡಿರುವ ಶಂಕೆ!

‘ಚಿಕ್‌ ಕಿಂಗ್ ಇಟ್ಸ್ ಮೈ ಚಾಯ್ಸ್​​’ ಆಹಾರ ಸಂಸ್ಥೆಯಿಂದ ಲೇಡಿಹಿಲ್‌ ನಿವಾಸಿ ಸಲ್ಮಾ ಸಿಮ್ರಾನ್ ಕೆ. ಎಂಬುವರು ಶನಿವಾರ ಸಂಜೆ ಚಿಕನ್ ಖಾದ್ಯ ಸಹಿತ ಬರ್ಗರ್ ಪಾರ್ಸಲ್‌ಗೆ ಆರ್ಡರ್ ಮಾಡಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪಾರ್ಸಲ್ ಮನೆ ಬಾಗಿಲಿಗೆ ಬಂದಿದೆ. ನಂತರ ಸಿಮ್ರಾನ್​​ ಸಹಿತ ಮಕ್ಕಳು ಹಾಗೂ ತಾಯಿ ಅಲ್ಪ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದ್ದಾರೆ. ಈ ಸಂದರ್ಭ ಚಿಕನ್ ಖಾದ್ಯದಲ್ಲಿ ದಿಢೀರ್ ಜೀವಂತ ಹುಳುವೊಂದು ಗೋಚರಿಸಿದೆ. ಇದರಿಂದ ಇಡೀ ಕುಟುಂಬವೇ ಆತಂಕ್ಕೀಡಾಗಿದೆ. ಈ ಬಗ್ಗೆ ಅವರು ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ABOUT THE AUTHOR

...view details