ಕರ್ನಾಟಕ

karnataka

ETV Bharat / state

ಜನಸಂಖ್ಯಾ ಸ್ಫೋಟಕ್ಕೆ ಜನತೆ, ಸಮಾಜ ಹಾಗೂ ವ್ಯವಸ್ಥೆ ಕಾರಣ: ಬಿ.ಎಲ್​​.ಸಂತೋಷ್​​

ಜನಸಂಖ್ಯೆ ಸ್ಫೋಟಗೊಳ್ಳಲು ಜನತೆ, ಸಮಾಜ ಹಾಗೂ ವ್ಯವಸ್ಥೆಯೇ ಕಾರಣ ಎಂದು ಟಿಎಂಎಪೈ ಕನ್ವೆನ್ಷನ್ ಹಾಲ್​ನಲ್ಲಿ ನಡೆಯುತ್ತಿರುವ ಲಿಟ್​ ಫೆಸ್ಟ್​​ನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಭಿಪ್ರಾಯಪಟ್ಟರು. ಇನ್ನು ಧರ್ಮ ಎಂಬುವುದು ದೇವರು ಹಾಗೂ ಆತನ ಸೃಷ್ಟಿಯ ನಡುವೆ ಇರುವ ಸಂಬಂಧವನ್ನು‌ ಉತ್ಪತ್ತಿ ಮಾಡುವ ಮಾಧ್ಯಮ ಎಂದು ಕೇರಳದ ರಾಜ್ಯಪಾಲ ಆರೀಫ್ ಮಹಮ್ಮದ್ ಖಾನ್ ಹೇಳಿದರು.

literature fest at mangalore
ಜನಸಂಖ್ಯೆಯು ಸ್ಪೋಟಗೊಳ್ಳಲು ಜನತೆ, ಸಮಾಜ ಹಾಗೂ ವ್ಯವಸ್ಥೆ ಕಾರಣ: ಬಿ.ಎಲ್.ಸಂತೋಷ್

By

Published : Nov 30, 2019, 8:22 PM IST

ಮಂಗಳೂರು:ಜನಸಂಖ್ಯೆ ಸ್ಫೋಟಗೊಳ್ಳಲು ಜನತೆ, ಸಮಾಜ ಹಾಗೂ ವ್ಯವಸ್ಥೆಯೇ ಕಾರಣ ಎಂದು ಟಿಎಂಎಪೈ ಕನ್ವೆನ್ಷನ್ ಹಾಲ್​ನಲ್ಲಿ ನಡೆಯುತ್ತಿರುವ ಲಿಟ್​ ಫೆಸ್ಟ್​​ನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಭಿಪ್ರಾಯಪಟ್ಟರು.

ಜನಸಂಖ್ಯೆ ಸ್ಫೋಟಗೊಳ್ಳಲು ಜನತೆ, ಸಮಾಜ ಹಾಗೂ ವ್ಯವಸ್ಥೆ ಕಾರಣ: ಬಿ.ಎಲ್.ಸಂತೋಷ್

ನಗರದ ಟಿಎಂಎಪೈ ಕನ್ವೆನ್ಷನ್ ಹಾಲ್​ನಲ್ಲಿ ನಡೆಯುತ್ತಿರುವ ಲಿಟ್​ ಫೆಸ್ಟ್​ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಳದ ಪರಿಣಾಮ ಲಾಭವೂ ಆಗಿದೆ, ಅಪಾಯಕಾರಿಯೂ ಆಗಿದೆ. ಆದ್ದರಿಂದ ಇಡೀ ಜಗತ್ತಿನಲ್ಲಿ ಇದೊಂದು ಸಮಸ್ಯೆಯಾಗಿಯೂ ಇದೆ. ಸಮಾಜ, ವ್ಯವಸ್ಥೆ ಮತ್ತು ಸರ್ಕಾರ ಜನಸಂಖ್ಯಾ ಶಾಸ್ತ್ರವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಗಲಿಲ್ಲದಿದ್ದರೆ ಅಥವಾ ಧನಾತ್ಮಕವಾಗಿ ಬಳಸಿಕೊಳ್ಳಲು ವಿಫಲವಾದಲ್ಲಿ ಇದು ಬಹುದೊಡ್ಡ ಸಮಸ್ಯೆಯಾಗಿ ತಲೆದೋರಲಿದೆ ಎಂದರು.

ಇನ್ನು ಕೇರಳದ ರಾಜ್ಯಪಾಲ ಆರೀಫ್ ಮಹಮ್ಮದ್ ಖಾನ್ ಮಾತನಾಡಿ, ಧರ್ಮ ಎಂಬುವುದು ದೇವರು ಹಾಗೂ ಆತನ ಸೃಷ್ಟಿಯ ನಡುವೆ ಇರುವ ಸಂಬಂಧವನ್ನು‌ ಉತ್ಪತ್ತಿ ಮಾಡುವ ಮಾಧ್ಯಮ. ಈ ಇಬ್ಬರ ಮಧ್ಯದಲ್ಲಿ ಮಧ್ಯವರ್ತಿ ಇರಬಾರದು ಎಂದು ಹೇಳಿದರು. ಜೊತೆಗೆ ದೇವರನ್ನು ಒಂದು ಗುಂಪಿನ ನಂಬಿಕೆಯುಳ್ಳ ಸಮುದಾಯ ಅಥವಾ ಧರ್ಮಕ್ಕೆ ಸೀಮಿತಗೊಳಿಸಲೂ ಆಗುವುದಿಲ್ಲ. ಧರ್ಮದ ಉದ್ದೇಶ ಮಾನವರನ್ನು ಬೇರ್ಪಡಿಸುವುದಲ್ಲ, ಒಗ್ಗೂಡಿಸುವುದು ಎಂದು ಹೇಳಿದರು.

ABOUT THE AUTHOR

...view details