ಮಂಗಳೂರು: ಲಿಟರೆಸಿ ಫೌಂಡೇಶನ್ ಆಶ್ರಯದಲ್ಲಿ ನಗರದ ಟಿಎಂಎಪೈ ಸಭಾಂಗಣದಲ್ಲಿ ನಡೆಯುತ್ತಿರುವ ಎರಡು ದಿನಗಳ ಲಿಟ್ ಫೆಸ್ಟ್ ಗೆ ಹಿರಿಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರು ಚಾಲನೆ ನೀಡಿದರು.
1835ರಲ್ಲಿ ಮೆಕಾಲೆಯ ಪ್ರಯೋಗದಿಂದ ದೇಶದ ದುರ್ದೈವ ಆರಂಭವಾಯಿತು : ಚಂದ್ರಶೇಖರ ಕಂಬಾರ - Litfest in Mangalore news
ಲಿಟರೆಸಿ ಫೌಂಡೇಶನ್ ಆಶ್ರಯದಲ್ಲಿ ನಗರದ ಟಿಎಂಎಪೈ ಸಭಾಂಗಣದಲ್ಲಿ ನಡೆಯುತ್ತಿರುವ ಎರಡು ದಿನಗಳ ಲಿಟ್ ಫೆಸ್ಟ್ಗೆ ಹಿರಿಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರು ಚಾಲನೆ ನೀಡಿದರು.
![1835ರಲ್ಲಿ ಮೆಕಾಲೆಯ ಪ್ರಯೋಗದಿಂದ ದೇಶದ ದುರ್ದೈವ ಆರಂಭವಾಯಿತು : ಚಂದ್ರಶೇಖರ ಕಂಬಾರ Lit fest inaugurated in Mangalore, ಮಂಗಳೂರಿನಲ್ಲಿ ಲಿಟ್ ಫೆಸ್ಟ್ ಆರಂಭ ಸುದ್ದಿ](https://etvbharatimages.akamaized.net/etvbharat/prod-images/768-512-5216280-thumbnail-3x2-kambar.jpg)
ಇದೇ ವೇಳೆ ಮಾತನಾಡಿದ ಚಂದ್ರಶೇಖರ ಕಂಬಾರರು, ದೇಶದ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯನ್ನು ಮುರಿಯಲು ಮೆಕಾಲೆ ದೇಶದಲ್ಲಿ ಇಂಗ್ಲೀಷ್ ಭಾಷೆಯ ಶಿಕ್ಷಣ ನೀಡಿದರು. 1835 ರಲ್ಲಿ ಮೆಕಾಲೆ ಮಾಡಿದ ಈ ಪ್ರಯೋಗದಿಂದ ದೇಶದ ದುರ್ದೈವ ಆರಂಭವಾಯಿತು ಎಂದು ಅಭಿಪ್ರಾಯಪಟ್ಟರು.
ಬ್ರಿಟಿಷರಿಗೆ ಭಾರತವನ್ನು ಗೆಲ್ಲಲು ಈ ದೇಶದ ಆಧ್ಯಾತ್ಮಿಕತೆ, ಸಂಸ್ಕೃತಿಯನ್ನು ಮುರಿಯಬೇಕಾಗಿತ್ತು. ಅದಕ್ಕಾಗಿ ಇಂಗ್ಲಿಷ್ ಶಿಕ್ಷಣ ಕಡ್ಡಾಯ ಮಾಡಲಾಯಿತು.ಇಂಗ್ಲೀಷ್ಎಷ್ಟರಮಟ್ಟಿಗೆ ವ್ಯಾಪಿಸಿದೆ ಎಂದರೆ ಈಗ ವಿಜ್ಞಾನವನ್ನು ನಮ್ಮ ಭಾಷೆಯಲ್ಲಿ ಕಲಿಸಲು ಇನ್ನೂ ಸಾಧ್ಯವಾಗಿಲ್ಲ.ಇಂಗ್ಲೀಷ್ಗುಲಾಮಗಿರಿ ಎಷ್ಟು ಬೇರೂರಿದೆ ಎಂಬುದು ಇದರಲ್ಲಿ ಗೊತ್ತಾಗಲಿದೆ. ನಮ್ಮತನ ಕಂಡುಕೊಳ್ಳಬೇಕಾದ ಅಗತ್ಯ ಇಂದು ವಿಪರೀತ ಇದೆ. ಇ-ಲಿಟರೇಚರ್ ಸುಧಾರಣೆ ಆಗಬೇಕಾಗಿದೆ ಎಂದರು.