ಬಂಟ್ವಾಳ:ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಅಡ್ಕ ಎಂಬಲ್ಲಿ ಬಾರ್ವೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 49 ಸಾವಿರ ರೂ. ಮೌಲ್ಯದ ಮದ್ಯದ ಬಾಟಲಿಗಳನ್ನು ಕದ್ದೊಯ್ದಿದ್ದಾರೆ.
ಬಾರ್ಗೆ ನುಗ್ಗಿ ಮದ್ಯದ ಬಾಟ್ಲಿಗಳನ್ನೇ ಹೊತ್ತೊಯ್ದ ಕಳ್ಳರು!
ಬಾರ್ವೊಂದಕ್ಕೆ ಕನ್ನ ಹಾಕಿರುವ ಕಳ್ಳರು ಸರಿಸುಮಾರು 49 ಸಾವಿರಕ್ಕೂ ಅಧಿಕ ಮೌಲ್ಯದ ಮದ್ಯದ ಬಾಟಲಿ ಕಳವು ಮಾಡಿದ್ದಾರೆ.
bantwal bar shop
ಈ ಕುರಿತು ಬಾರ್ ಮ್ಯಾನೇಜರ್ ನೀಡಿದ ದೂರಿನನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಅಡ್ಕ ಎಂಬಲ್ಲಿ ಘಟನೆ ಜುಲೈ 7ರ ರಾತ್ರಿಯಿಂದ ಜುಲೈ 8ರ ಬೆಳಗ್ಗೆ 9.30ರೊಳಗೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಬಾರ್ ಕಟ್ಟಡದ ಹಿಂಭಾಗದ ಬಾಗಿಲು ಹಾಗೂ ಅದರ ಬೀಗವನ್ನು ಕಳ್ಳರು ಮುರಿದು ಒಳ ಪ್ರವೇಶಿಸಿ ಒಟ್ಟು ಅಂದಾಜು ಮೌಲ್ಯ 49,656 ರೂಪಾಯಿಗಳ ಮದ್ಯದ ಬಾಟಲಿಗಳನ್ನು ಕಳವು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.