ಉಳ್ಳಾಲ : ಮೊಗವೀರಪಟ್ನ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ವೇಳೆ ನೀರು ಪಾಲಾಗುತ್ತಿದ್ದ ಒಂದೇ ಕುಟುಂಬದ ನಾಲ್ವರನ್ನು ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ರಕ್ಷಿಸಿದ್ದಾರೆ.
ಉಳ್ಳಾಲ.. ಸಮುದ್ರ ಪಾಲಾಗುತ್ತಿದ್ದ ಒಂದೇ ಕುಟುಂಬದ ನಾಲ್ವರ ರಕ್ಷಣೆ.. - ಉಳ್ಳಾಲದಲ್ಲಿ ಒಂದೇ ಕುಟುಂಬದ ನಾಲ್ವರ ರಕ್ಷಣೆ
ಉಳ್ಳಾಲದ ಮೊಗವೀರಪಟ್ನ ಸಮುದ್ರ ತೀರದಲ್ಲಿ ನೀರು ಪಾಲಾಗುತ್ತಿದ್ದ ನಾಲ್ವರನ್ನು ರಕ್ಷಿಸಲಾಗಿದೆ..
ಪ್ರಾಣಪಾಯದಿಂದ ಪಾರಾದ ಮೊಗಹಮ್ಮದ್ ಗೌಸ್
ಧಾರವಾಡದ ನಿಜಾಮುದ್ದೀನ್ ಕಾಲೋನಿಯಿಂದ ಉಳ್ಳಾಲ ದರ್ಗಾ ಸಂದರ್ಶನಕ್ಕೆ ಬಂದಿದ್ದ ಮೊಹಮ್ಮದ್ ಗೌಸ್ ಪತ್ನಿ ರೇಷ್ಮಾ ಮಕ್ಕಳಾದ ನಿಜಾಮ್, ನೀಷ್ಮಾ ರಕ್ಷಿಸಲ್ಪಟ್ಟವರು.
ಶಿವಾಜಿ ಈಜುಗಾರರ ಸಂಘ ಉಳ್ಳಾಲದ ಸದಸ್ಯರಾದ ಕುನಾಲ್ ಅಮೀನ್, ಕೋಸ್ಟ್ ಗಾರ್ಡ್ ಸಿಬ್ಬಂದಿ ಕಿರಣ್ ಸಮುದ್ರದಲ್ಲಿ ಜೀವದ ಹಂಗು ತೊರೆದು ಮುಳುಗುತ್ತಿದ್ದವರನ್ನು ರಕ್ಷಿಸಿದ್ದಾರೆ.