ಮಂಗಳೂರು:ಶವಸಂಸ್ಕಾರವನ್ನು ಅನ್ಯ ಸಮುದಾಯದವರು ಮಾಡುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಹೇಳಿಕೆ ನೀಡಿದ ಬಳಿಕ ಅವರಿಗೆ ವಿದೇಶದಿಂದ ಜೀವ ಬೆದರಿಕೆ ಕರೆಗಳು ಬರಲು ಆರಂಭವಾಗಿವೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅನ್ಯ ಸಮುದಾಯವರಿಂದ ಅಂತ್ಯಸಂಸ್ಕಾರ ವಿಚಾರ: ಶರಣ್ ಪಂಪ್ವೆಲ್ಗೆ ಜೀವ ಬೆದರಿಕೆ - ಶರಣ್ ಪಂಪ್ವೆಲ್,
ಅಂತ್ಯಸಂಸ್ಕಾರವನ್ನು ಅನ್ಯ ಸಮುದಾಯದವರು ಮಾಡುವ ಅಗತ್ಯವಿಲ್ಲ. ಕರಾವಳಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುವವರಿದ್ದಾರೆ ಎಂದು ಶರಣ್ ಪಂಪ್ವೆಲ್ ಹೇಳಿದ್ದರು.
![ಅನ್ಯ ಸಮುದಾಯವರಿಂದ ಅಂತ್ಯಸಂಸ್ಕಾರ ವಿಚಾರ: ಶರಣ್ ಪಂಪ್ವೆಲ್ಗೆ ಜೀವ ಬೆದರಿಕೆ Life threats on Sharan Pumpwell, Life threats on Sharan Pumpwell from abroad, Sharan Pumpwell, Sharan Pumpwell news, ಶರಣ್ ಪಂಪ್ವೆಲ್ಗೆ ಜೀವ ಬೆದರಿಕೆ, ಶರಣ್ ಪಂಪ್ವೆಲ್ಗೆ ವಿದೇಶಗಳಿಂದ ಜೀವ ಬೆದರಿಕೆ, ಶರಣ್ ಪಂಪ್ವೆಲ್, ಶರಣ್ ಪಂಪ್ವೆಲ್ ಸುದ್ದಿ,](https://etvbharatimages.akamaized.net/etvbharat/prod-images/768-512-11716150-589-11716150-1620708025821.jpg)
ಶರಣ್ ಪಂಪ್ವೆಲ್ಗೆ ವಿದೇಶಗಳಿಂದ ಜೀವ ಬೆದರಿಕೆ
ಅಂತ್ಯಸಂಸ್ಕಾರವನ್ನು ಅನ್ಯ ಸಮುದಾಯದವರು ಮಾಡುವ ಅಗತ್ಯವಿಲ್ಲ. ಕರಾವಳಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುವವರಿದ್ದಾರೆ ಎಂದು ಶರಣ್ ಪಂಪ್ವೆಲ್ ಹೇಳಿದ್ದರು. ಈ ಹೇಳಿಕೆಯ ಪೋಸ್ಟರ್ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧ ಚರ್ಚೆಗಳೂ ನಡೆದಿತ್ತು.
ಇದರ ಬಳಿಕ ಕಳೆದ ಎರಡು ದಿನಗಳಿಂದ ಶರಣ್ ಪಂಪ್ವೆಲ್ಗೆ ವಿದೇಶದಿಂದ ಇಂಟರ್ನೆಟ್ ಕಾಲ್ ಮತ್ತು ಫೋನ್ ಮೂಲಕ ಜೀವ ಬೆದರಿಕೆ ಕರೆಗಳು ಬರಲು ಆರಂಭವಾಗಿದೆ. ಈ ಬಗ್ಗೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಅವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.