ಮಂಗಳೂರು :ರಕ್ತದಾನ ಮಾಡುವುದೆಂದರೆ ಕೆಲವರಿಗೆ ಅಂಜಿಕೆ, ಇನ್ನು ಕೆಲವರಿಗೆ ಉತ್ಸಾಹ. ಇಂತಹ ಉತ್ಸಾಹಿಗಳನ್ನು ಸೇರಿಸಿಕೊಂಡು ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಗ್ರೂಪ್ ರಚಿಸಿ, ರಕ್ತದಾನ ಮಾಡುವ ಕಾರ್ಯವನ್ನು ಬ್ಲಡ್ ಡೋನರ್ಸ್ ಮಂಗಳೂರು ಕಳೆದ ಹಲವು ವರ್ಷಗಳಿಂದ ಮಾಡುತ್ತಿದೆ.
ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಜೀವ ರಕ್ಷಣೆ; ಮಂಗಳೂರಿನ ಯುವಕರ ಮಾನವೀಯ ಕೆಲಸ - Blood Donors Youth Team Mangaluru
ಸಾಮಾಜಿಕ ಜಾಲತಾಣಗಳಲ್ಲಿ ಬ್ಲಡ್ ಡೋನರ್ಸ್ ಎಂಬ ಹೆಸರಿನಲ್ಲಿ ಗುಂಪು ಕಟ್ಟಿಕೊಂಡು ರಕ್ತದಾನ ಮಾಡುವ ಮೂಲಕ ಮಂಗಳೂರಿನ ಉತ್ಸಾಹಿ ಯುವಕರ ತಂಡವೊಂದು ಮಾದರಿ ಕೆಲಸ ಮಾಡುತ್ತಿದೆ.
ಈ ಸಂಘಟನೆ 60 ವಾಟ್ಸ್‌ಆ್ಯಪ್ ಗ್ರೂಪ್ಗಳನ್ನು ಮಾಡಿದ್ದು, ಈ ಗ್ರೂಪ್ಗಳಲ್ಲಿ ಆಯಾಯ ಪ್ರದೇಶದ ರಕ್ತದಾನಿಗಳನ್ನು ಸೇರಿಸಿಕೊಳ್ಳಲಾಗಿದೆ. ಪ್ರತಿಯೊಂದು ಗ್ರೂಪ್ನ ಅಡ್ಮಿನ್ಗಳನ್ನು ಸೇರಿಸಿಕೊಂಡು 24/7 ಎನ್ನುವ ಇನ್ನೊಂದು ಗ್ರೂಪ್ ಮಾಡಲಾಗಿದೆ. ಈ ವಾಟ್ಸ್‌ಆ್ಯಪ್ ಗ್ರೂಪ್ಗಳಲ್ಲಿ ಬರುವ ರಕ್ತದ ಬೇಡಿಕೆಯನ್ನು ಅಡ್ಮಿನ್ ಗ್ರೂಪ್ನಲ್ಲಿ ಹಾಕಿ ರಕ್ತದ ವ್ಯವಸ್ಥೆ ಮಾಡುತ್ತಾರೆ.
ಈ ಸಂಘಟನೆಯ ಮೂಲಕ ಅಲ್ಲಲ್ಲಿ ರಕ್ತದಾನ ಶಿಬಿರ ಆಯೋಜಿಸಿ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಜೊತೆಗೆ ತುರ್ತಾಗಿ ಯಾರಿಗಾದರೂ ರಕ್ತ ಬೇಕಿದ್ದರೆ, ಶೀಘ್ರ ವ್ಯವಸ್ಥೆ ಮಾಡುವ ಮೂಲಕ ಈ ತಂಡ ಮಾದರಿಯಾಗಿದೆ. ಗಲ್ಫ್ ದೇಶಗಳಲ್ಲಿ ಕೂಡ ಸಂಘಟನೆಯ ತಂಡ ಸಕ್ರೀಯವಾಗಿದೆ.