ಬಂಟ್ವಾಳ:ಇಲ್ಲಿನ ಬಾಳೆಪುಣಿ ಗ್ರಾಮದ ಹೂಹಾಕುವಕಲ್ಲು ಎಂಬಲ್ಲಿ ಇಸ್ಮಾಯಿಲ್ ಕಾನತ್ತೂರು ಗುಜರಿ ಅಂಗಡಿ ನಡೆಸುತ್ತಿದ್ದಾರೆ. ಇವರು 25 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ವಿದ್ಯಾರ್ಥಿಗಳು, ಸಾರ್ವಜನಿಕರು ಗುಜರಿಗೆ ಮಾರಿದ ಪುಸ್ತಕದಲ್ಲಿ ಉತ್ತಮ ಪುಸ್ತಕಗಳನ್ನು ಆಯ್ದು ತಮ್ಮ ಪುಟ್ಟ ನಿವಾಸದಲ್ಲಿ ಗ್ರಂಥಾಲಯವನ್ನೇ ಮಾಡಿದ್ದಾರೆ.
ಧರ್ಮ ಗ್ರಂಥಗಳು, ಪಠ್ಯ ಪುಸ್ತಕಗಳು: ಇಸ್ಮಾಯಿಲ್ ಅವರ ಲೈಬ್ರೆರಿಯಲ್ಲಿ 10 ರೂ. ಪುಸ್ತಕದಿಂದ ಹಿಡಿದು 2 ಸಾವಿರ ರೂ. ಗೂ ಅಧಿಕ ವೌಲ್ಯದ ಪುಸ್ತಕಗಳಿವೆ. ನಾನಾ ಧರ್ಮಗ್ರಂಥಗಳು, ಕಥೆ ಪುಸ್ತಕಗಳು, ಮಹಾನ್ ಪುರುಷರ ಪುಸ್ತಕಗಳು, ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿ, ಎಂಜಿನಿಯರಿಂಗ್ವರೆಗಿನ ಪುಸ್ತಕಗಳು ಇವರ ಸಂಗ್ರಹದಲ್ಲಿವೆ. ಪುಸ್ತಕ ಕೊಂಡುಕೊಳ್ಳಲು ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಇವರ ಮನೆಗೆ ಬಂದು ಪುಸ್ತಕಗಳನ್ನು ಹುಡುಕಾಡಿ ಪಡೆದುಕೊಂಡು ಹೋಗುತ್ತಾರೆ.