ಬಂಟ್ವಾಳ: ಮನೆಗೆ ತೆರಳಲು ದಾರಿ ತೋರಿಸಿ ಎಂದು ರಾಷ್ಟ್ರೀಯ ಹೆದ್ದಾರಿ ಬದಿಯ ನಿವಾಸಿಯೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿಯಿಂದ ತಮ್ಮ ಮನೆಗೆ ತೆರಳುವ ರಸ್ತೆ ಮುಚ್ಚಿರುವ ಬಗ್ಗೆ ಇಲ್ಲಿನ ಸೂರಿಕುಮೇರು ನಿವಾಸಿ ಗೋಪಾಲ ಶಾಸ್ತ್ರಿ ಎಂಬವರು ಸಿಎಂಗೆ ಪತ್ರ ಬರೆದಿದ್ದಾರೆ.
ಮನೆಗೆ ತೆರಳುವ ದಾರಿ ಕಾಣದಾಗಿದೆ ಎಂದು ಹಿರಿಯರೊಬ್ಬರಿಂದ ಸಿಎಂಗೆ ಪತ್ರ
ಮನೆಗೆ ತೆರಳಲು ದಾರಿ ತೋರಿಸಿ ಎಂದು ರಾಷ್ಟ್ರೀಯ ಹೆದ್ದಾರಿ ಬದಿಯ ನಿವಾಸಿಯೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿಯಿಂದ ತಮ್ಮ ಮನೆಗೆ ತೆರಳುವ ರಸ್ತೆ ಮುಚ್ಚಿರುವ ಬಗ್ಗೆ ಇಲ್ಲಿನ ಸೂರಿಕುಮೇರು ನಿವಾಸಿ ಗೋಪಾಲ ಶಾಸ್ತ್ರಿ ಎಂಬವರು ಸಿಎಂಗೆ ಪತ್ರ ಬರೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚತುಷ್ಪಥ ರಸ್ತೆಯ ಕಾಮಗಾರಿ ಆರಂಭವಾಗಿದೆ. ಜೊತೆಗೆ ಜೋರಾದ ಮಳೆಗೆ ಕೂವೆಕೋಡಿ ನಿವಾಸಕ್ಕೆ ಹೋಗುವ ರಸ್ತೆ ಮುಚ್ಚಿ ಹೋಗಿದೆ. ಮೊನ್ನೆ ಸುರಿದ ಜೋರಾದ ಮಳೆಗೆ ರಸ್ತೆ ಬದಿಗೆ ಹಾಕಿದ್ದ ಮಣ್ಣು ಅಡಕೆ ತೋಟಕ್ಕೆ ನುಗ್ಗಿರುವುದರಿಂದ ಅಡಕೆ ಫಸಲು ನೆಲಕಚ್ಚುವ ಭೀತಿ ಉಂಟಾಗಿದೆ. ಅಲ್ಲದೇ ಕೃಷಿಭೂಮಿಯಲ್ಲಿರುವ ಅಡಕೆ, ತೆಂಗು, ಬಾಳೆ,ಕರಿಮೆಣಸು ಕೃಷಿಯೂ ಮಳೆಯಿಂದ ಉಂಟಾದ ಕೆಸರಿಗೆ ನೆಲಕಚ್ಚುವ ಭೀತಿ ಎದುರಾಗಿದೆ ಬರೆದಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟವರಿಗೆ ಪತ್ರ ಮುಖೇನ ವಿನಂತಿಸಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಗೋಪಾಲ ಶಾಸ್ತ್ರಿಯವರು ಸಿಎಂಗೆ ಇ-ಮೇಲ್ ಮೂಲಕ ಪತ್ರ ಬರೆದಿದ್ದಾರೆ.
ಓದಿ :ಬೀಜ, ಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಿ: ಅಧಿಕಾರಿಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ