ಕರ್ನಾಟಕ

karnataka

ETV Bharat / state

ಮಕ್ಕಳ ಶಿಕ್ಷಣಕ್ಕಿಂತ ರೈತರ ವಿರುದ್ಧವಾದ ಸುಗ್ರಿವಾಜ್ಞೆ ತರುವುದು ಮುಖ್ಯವಾಗಿತ್ತಾ: ಯು.ಟಿ.ಖಾದರ್ ಪ್ರಶ್ನೆ - ಮಾಜಿ ಸಚಿವ ಯು.ಟಿ.ಖಾದರ್

ಈ ವರ್ಷವನ್ನು ಗಮನದಲ್ಲಿರಿಸಿ ಸರಿಯಾದ ಪಠ್ಯಕ್ರಮವನ್ನು ಪ್ರಿಂಟ್ ಮಾಡಿ, ಎಲ್ಲಾ ಮಕ್ಕಳಿಗೆ ನೀಡಲಿ‌. ಇದನ್ನು ಅನುಸರಿಸಿ ಮಕ್ಕಳು ಮನೆಯಲ್ಲಿಯೇ ಅಧ್ಯಯನ ನಡೆಸಲಿ. ಇಲ್ಲದಿದ್ದಲ್ಲಿ ಯಾವುದನ್ನು, ಎಷ್ಟು ಅಧ್ಯಯನ ಮಾಡುವುದು, ಸಿಲೆಬಸ್​ನಲ್ಲಿರುವ ಎಲ್ಲಾ ಪಾಠಗಳಲ್ಲಿ ಪರೀಕ್ಷೆ ನಡೆಯುತ್ತದೆಯೇ ಎಂಬ ಗೊಂದಲ ಮಕ್ಕಳಿಗೆ ಉಂಟಾಗುತ್ತದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

Former minister UT Khadar ಮಾಜಿ ಸಚಿವ ಯು.ಟಿ.ಖಾದರ್
ಮಾಜಿ ಸಚಿವ ಯು.ಟಿ.ಖಾದರ್

By

Published : Sep 29, 2020, 5:23 PM IST

Updated : Sep 29, 2020, 5:32 PM IST

ಮಂಗಳೂರು: ಶಾಲೆ ಆರಂಭಿಸುವ ಬಗ್ಗೆ ಸರ್ಕಾರ ಸ್ಪಷ್ಟವಾದ ತೀರ್ಮಾನ ಕೈಗೊಂಡು ತಿಳಿಸಲಿ‌. ಸರ್ಕಾರ ಈ ಬಗ್ಗೆ ಸರಿಯಾದ ತೀರ್ಮಾನ ಕೊಟ್ಟಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಹೆತ್ತವರು ಎಲ್ಲರೂ ಸರಿಯಾದ ಸಹಕಾರ ಖಂಡಿತ ನೀಡುತ್ತಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ಯು.ಟಿ.ಖಾದರ್ ಪ್ರಶ್ನೆ

ನಗರದ ಸರ್ಕ್ಯೂಟ್​ಹೌಸ್​ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವರ್ಷವನ್ನು ಗಮನದಲ್ಲಿರಿಸಿ ಸರಿಯಾದ ಪಠ್ಯಕ್ರಮವನ್ನು ಪ್ರಿಂಟ್ ಮಾಡಿ, ಎಲ್ಲಾ ಮಕ್ಕಳಿಗೆ ನೀಡಲಿ‌. ಇದನ್ನು ಅನುಸರಿಸಿ ಮಕ್ಕಳು ಮನೆಯಲ್ಲಿಯೇ ಅಧ್ಯಯನ ನಡೆಸಲಿ. ಇಲ್ಲದಿದ್ದಲ್ಲಿ ಯಾವುದನ್ನು, ಎಷ್ಟು ಅಧ್ಯಯನ ಮಾಡುವುದು, ಸಿಲೆಬಸ್​ನಲ್ಲಿರುವ ಎಲ್ಲಾ ಪಾಠಗಳಲ್ಲಿ ಪರೀಕ್ಷೆ ನಡೆಯುತ್ತದೆಯೇ ಎಂಬ ಗೊಂದಲ ಮಕ್ಕಳಿಗೆ ಉಂಟಾಗುತ್ತದೆ ಎಂದರು.

ಶಾಲೆ ತೆರೆಯುವ ಬಗ್ಗೆ ಸರ್ಕಾರ ಸರಿಯಾದ ನಿರ್ಧಾರವನ್ನು ಕೈಗೊಳ್ಳಬೇಕು‌. ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಮಕ್ಕಳ ಆರೋಗ್ಯವೂ ಮುಖ್ಯ. ಕಳೆದ ಬಾರಿ ಒಂದು ವರ್ಷ ಶಾಲೆಗೆ ಹೋದರೂ ಪಿಯುಸಿ ಹಾಗೂ ಎಸ್ಎಸ್ಎಲ್​ಸಿ ಹೊರತುಪಡಿಸಿ ಮಿಕ್ಕ ಸಣ್ಣ ತರಗತಿಯವರಿಗೆ ಝೀರೋ ವರ್ಷವೆಂದು ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಯಿತು. ಸರ್ಕಾರ ಸರಿಯಾದ ಪ್ಲ್ಯಾನ್ ಮಾಡದ ಹಿನ್ನೆಲೆಯಲ್ಲಿ ಡಿಸೆಂಬರ್​ವರೆಗೆ ಕೊರೊನಾ ನಿಗ್ರಹ ಆಗುವ ಲಕ್ಷಣಗಳು ಕಂಡುಬರುತ್ತಿಲ್ಲ ಎಂದು ಹೇಳಿದರು.

ಶಾಲೆ ಆರಂಭಿಸುವ ಬಗ್ಗೆ ರಾಜ್ಯ ಶಿಕ್ಷಣ ಸಚಿವರು ಎಲ್ಲಾ ಶಾಸಕರಿಗೆ ಅಭಿಪ್ರಾಯ ತಿಳಿಸುವಂತೆ ಪತ್ರ ಬರೆದಿದ್ದಾರೆ. ಮೊನ್ನೆ ಅಧಿವೇಶನದಲ್ಲಿ ಎಪಿಎಂಸಿ ಕಾನೂನು ಹಾಗೂ ಭೂಸುಧಾರಣಾ ಕಾಯ್ದೆಯ ಬಗ್ಗೆಯೇ ಚರ್ಚೆ ನಡೆಸಲಾಯಿತು. ಆದರೆ ಶಾಲೆ ಆರಂಭದ ಬಗ್ಗೆ ಯಾವುದೇ ಚರ್ಚೆ ನಡೆಸಲಾಗಿಲ್ಲ. ಮಕ್ಕಳ ಶಿಕ್ಷಣಕ್ಕಿಂತ ರೈತರ ವಿರುದ್ಧವಾದ ಸುಗ್ರಿವಾಜ್ಞೆ ತರುವುದು ಮುಖ್ಯವಾಗಿತ್ತಾ ಎಂದು ಪ್ರಶ್ನಿಸಿದರು.

Last Updated : Sep 29, 2020, 5:32 PM IST

ABOUT THE AUTHOR

...view details