ಕರ್ನಾಟಕ

karnataka

ETV Bharat / state

ನಾಗರ ಪಂಚಮಿಗೆ ಮಳೆ ಅಡ್ಡಿ: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಮಣ್ಯದಲ್ಲಿ ಭಕ್ತರು ವಿರಳ - less devoteess visiting to kukke subramanya in nagarapanchami

ನಾಗರಪಂಚಮಿ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಕುಕ್ಕೆ ಸುಬ್ರಮಣ್ಯಕ್ಕೆ ಭಕ್ತರು ಆಗಮಿಸುತ್ತಿದ್ದರು. ಆದರೆ ಈ ಬಾರಿ ಭಕ್ತರ ಆಗಮನದ ಸಂಖ್ಯೆ ಕುಸಿತವಾಗಿದೆ ಎಂದು ದೇವಾಲಯದ ಕಾರ್ಯ ನಿರ್ವಾಹಣಾಧಿಕಾರಿ ಹೇಳಿದ್ದಾರೆ.

less-devoteess-visiting-to-kukke-subramanya-in-nagarapanchami
ನಾಗರ ಪಂಚಮಿ : ವಿಶ್ವವಿಖ್ಯಾತ ನಾಗಕ್ಷೇತ್ರ ಕುಕ್ಕೆ ಸುಬ್ರಮಣ್ಯದಲ್ಲಿ ಭಕ್ತರು ವಿರಳ

By

Published : Aug 2, 2022, 3:22 PM IST

ಸುಬ್ರಮಣ್ಯ (ದಕ್ಷಿಣ ಕನ್ನಡ): ನಾಗರ ಪಂಚಮಿ ದಿನವಾದ ಇಂದು ನಾಡಿನ ಸುಪ್ರಸಿದ್ಧ ನಾಗಕ್ಷೇತ್ರ ಕುಕ್ಕೆಯಲ್ಲಿ ಜನರ ಆಗಮನ ವಿರಳವಾಗಿದೆ. ಕ್ಷೇತ್ರಕ್ಕೆ ನಾಗರ ಪಂಚಮಿ ದಿನವಾದ ಇಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕಿತ್ತು. ಆದರೆ ನಿನ್ನೆ ಆದಿ ಸುಬ್ರಮಣ್ಯದಲ್ಲಿ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.


ಆದಿ ಸುಬ್ರಮಣ್ಯದಲ್ಲಿ ಮರಳು ಕೆಸರುಮಿಶ್ರಿತ ನೆರೆನೀರು ನುಗ್ಗಿ ದೊಡ್ಡ ಆವಾಂತರ ಸೃಷ್ಟಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಭಕ್ತರು ದೇವಸ್ಥಾನಕ್ಕೆ ಆಗಮಿಸದಂತೆ ಮನವಿ ಮಾಡಿದ್ದರು. ರಾತ್ರಿಯಿಡೀ ದೇವಸ್ಥಾನದ ಅಧಿಕಾರಿಗಳು, ಸಿಬ್ಬಂದಿ ನೇತೃತ್ವದಲ್ಲಿ ಸ್ವಚ್ಛತೆ ಕಾರ್ಯ ಮಾಡಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೂ ಇಂದು ಭಕ್ತರ ಸಂಖ್ಯೆ ವಿರಳವಾಗಿತ್ತು.

ಇದನ್ನೂ ಓದಿ:ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ

ABOUT THE AUTHOR

...view details