ಬಂಟ್ವಾಳ:ಉರುಳಿಗೆ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಚಿರತೆಯನ್ನು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸಿದ್ದರು. ಆದರೆ, ಪಿಲಿಕುಳಕ್ಕೆ ಹಸ್ತಾಂತರ ಮಾಡುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದೆ. ಅಲ್ಲಿಪಾದೆ ಸಮೀಪದ ದೇವಸ್ಯಪಡೂರು ಬೀಜಪ್ಪಾಡಿ ಎಂಬಲ್ಲಿ ಚಿರತೆ ಉರುಳಿಗೆ ಬಿದ್ದಿತ್ತು.
ಉರುಳಿಗೆ ಬಿದ್ದ ಚಿರತೆ: ಪಿಲಿಕುಳಕ್ಕೆ ಹಸ್ತಾಂತರಿಸುವಾಗ ಮಾರ್ಗಮಧ್ಯೆ ಸಾವು - ಉರುಳಿಗೆ ಬಿದ್ದ ಚಿರತೆಯ ರಕ್ಷಣೆ
ಅಲ್ಲಿಪಾದೆ ಸಮೀಪದ ದೇವಸ್ಯಪಡೂರು ಗ್ರಾಮದ ಬೀಜಪ್ಪಾಡಿ ಸಮೀಪ ಕಾಡಿನಲ್ಲಿಟ್ಟಿದ್ದ ಉರುಳಿಗೆ ಸಿಕ್ಕಿ ಹಾಕಿಕೊಂಡಿದ್ದ ಚಿರತೆಯನ್ನು ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯರು ರಕ್ಷಿಸಿದ್ದು, ಪಿಲಿಕುಳ ನಿಸರ್ಗಧಾಮಕ್ಕೆ ಹಸ್ತಾಂತರಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದೆ.
![ಉರುಳಿಗೆ ಬಿದ್ದ ಚಿರತೆ: ಪಿಲಿಕುಳಕ್ಕೆ ಹಸ್ತಾಂತರಿಸುವಾಗ ಮಾರ್ಗಮಧ್ಯೆ ಸಾವು Leopard protection](https://etvbharatimages.akamaized.net/etvbharat/prod-images/768-512-14802465-thumbnail-3x2-bng.jpg)
ಉರುಳಿಗೆ ಬಿದ್ದ ಚಿರತೆಯ ರಕ್ಷಣೆ
ಸುಮಾರು 6 ವರ್ಷದ ಗಂಡು ಚಿರತೆಯೊಂದು ಉರುಳಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ನೇತೃತ್ವದ ತಂಡ ರಾತ್ರಿ 9 ಗಂಟೆಯಿಂದ ಮುಂಜಾನೆ 4 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ಚಿರತೆ ರಕ್ಷಣೆ ಮಾಡಿದ್ದಾರೆ. ರಕ್ಷಿಸಿದ ಚಿರತೆಯನ್ನು ಪಿಲಿಕುಳ ನಿಸರ್ಗಧಾಮಕ್ಕೆ ಹಸ್ತಾಂತರಿಸಲು ತೆರಳುತ್ತಿದ್ದಾಗ ಮಾರ್ಗಮಧ್ಯೆ ಅನಾರೋಗ್ಯದಿಂದ ಮೃತಪಟ್ಟಿದೆ.
ಇದನ್ನೂ ಓದಿ:ಮೈಸೂರು ವಿವಿ ಘಟಿಕೋತ್ಸವ : ಪುನೀತ್ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ