ಬಂಟ್ವಾಳ: ಕೊರೊನಾ ನೆಪವೊಡ್ಡಿ, ಪೂರ್ವ ಸೂಚನೆ ಇಲ್ಲದೆ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಜಿಲ್ಲೆಯ 17 ಮಂದಿ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ಕೆಲಸ ಕಳೆದುಕೊಂಡ ನೌಕರರು ಅಳಲು ತೋಡಿಕೊಂಡಿದ್ದಾರೆ.
ಕೊರೊನಾ ನೆಪವೊಡ್ಡಿ ಕೆಲಸಕ್ಕೆ ಬರಬೇಡಿ ಎಂದರು: ಅಟಲ್ ಜೀ ಜನಸ್ನೇಹಿ ಕೇಂದ್ರದ ನೌಕರರ ಅಳಲು - Lease Based Employee problems
ಕೊರೊನಾ ನೆಪವೊಡ್ಡಿ, ಪೂರ್ವಸೂಚನೆ ಇಲ್ಲದೆ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ 17 ಮಂದಿ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ಕೆಲಸ ಕಳೆದುಕೊಂಡ ನೌಕರರು ಅಳಲು ತೋಡಿಕೊಂಡಿದ್ದಾರೆ. ಇವರಲ್ಲಿ ಒಬ್ಬರು ವಿಕಲಚೇತನರೂ ಇದ್ದಾರೆ.
ಗುತ್ತಿಗೆ ನೌಕರರಾದ ಪ್ರಮೀಳಾ, ಪೂಜಶ್ರೀ, ಗುಣಶ್ರೀ, ನಮಿತಾ, ಭವ್ಯ ಬಂಟ್ವಾಳ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 795 ಮಂದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಅಂಗವಿಕಲರೂ ಸೇರಿ ಒಟ್ಟು 17 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮೂರು ತಿಂಗಳ ಸಂಬಳವನ್ನೂ ನೀಡದೆ ಕೆಲಸ ಮಾಡಿಸಿಕೊಂಡು ಕೆಲಸಕ್ಕೆ ಬರಬೇಡಿ ಎಂದಿದ್ದಾರೆ ಎಂದು ಹೇಳಿದರು.
ಕೊರೊನಾ ಸಂದರ್ಭ ತಾಲೂಕು ಕಚೇರಿ ಸಿಬ್ಬಂದಿ ನಮ್ಮನ್ನು ಕರೆಸಿ ದುಡಿಸಿಕೊಂಡಿದ್ದಾರೆ. ಆದರೆ ಏಕಾಏಕಿ ನಮ್ಮನ್ನು ಕೆಲಸಕ್ಕೆ ಬರಬೇಡಿ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜೇಶ್ ನಾಯ್ಕ್ ಸಹಿತ ಪ್ರತಿಯೊಂದು ತಾಲೂಕಿನ ಶಾಸಕರಿಗೂ ಮನವಿ ಮಾಡಿದ್ದೇವೆ ಎಂದರು.